ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡಿನಲ್ಲಿ ಪವಿತ್ರ ರಂಜಾನ್ ಆಚರಣೆ

ನಂಜನಗೂಡು : ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಮುಸ್ಲಿಂ ಬಾಂಧವರಿಂದ ಪವಿತ್ರ ರಂಜಾನ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು.

ಕಳೆದ ಒಂದು ತಿಂಗಳಿನಿಂದ ರಂಜಾನ್ ಹಬ್ಬದ ಹಿನ್ನೆಲೆ ಮುಸ್ಲಿಂ ಬಾಂಧವರು ಉಪವಾಸವನ್ನು ಮಾಡುತ್ತಿದ್ದರು. ನಗರದ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ 7:30 ರಿಂದ 8:30ರ ವರೆಗೆ ಹಾಗೂ 10:30 ರಿಂದ 11:30ವರೆಗೆ ನಮಾಜ್ ಮಾಡಿ, ಕುರಾನ್ ಬಗ್ಗೆ ಮಸೀದಿಯ ಧರ್ಮಗುರುಗಳು ಬೋಧನೆಯನ್ನು ನಡೆಸಿ, ದೇಶದಲ್ಲಿ ಮಳೆ, ಬೆಳೆ, ಶಾಂತಿ ದೊರಕಲಿ ಎಂದು ಹಾರೈಸಿ ರಂಜಾನ್ ಹಬ್ಬದ ಶುಭಾಶಯಗಳು ಕೋರಿದರು. ರಂಜಾನ್ ಹಬ್ಬದ ಹಿನ್ನೆಲೆ ಮುಸ್ಲಿಂ ಬಾಂಧವರು ಹೊಸ ಉಡುಗೆಗಳನ್ನು ತೊಟ್ಟು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಉಪವಾಸವನ್ನು ಮುಕ್ತಾಯಗೊಳಿಸಿದರು.

ಹಬ್ಬದ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Edited By :
PublicNext

PublicNext

21/03/2026 02:11 pm

Cinque Terre

6.84 K

Cinque Terre

0

ಸಂಬಂಧಿತ ಸುದ್ದಿ