ನಂಜನಗೂಡಿನಲ್ಲಿ ಸರಣಿ ಅಂಗಡಿಗಳ ಕಳ್ಳತನ ಪ್ರಕರಣ: ದರೋಡೆಕೋರನ ಬಂಧಿಸಿದ ಪೊಲೀಸರು
ನಂಜನಗೂಡು: ಕಳೆದ 10 ದಿನಗಳ ಹಿಂದೆ ನಗರದ ಬೇಕರಿಯೊಂದರಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರನೊಬ್ಬನನ್ನು ನಂಜನಗೂಡು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರದ ಸತ್ತಿರೋಡ್ ಸಮೀಪದ ಗಾಳಿಪುರ ಗ್ರಾಮದ ನಿವಾಸಿ ಸೈಯಾದ್ ರಿಯಾಜ್ ಅಲಿಯಾಸ್ ರಯ್ಯ ಬಂದಿತ ಆರೋಪಿಯಾಗಿದ್ದಾನೆ.
ಮಾರ್ಚ್ 1ರಂದು ನಗರದ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪದ ಬೃಂದಾವನ ಹಾಸನ್ ಅಯ್ಯಂಗಾರ್ ಬೇಕರಿಯಲ್ಲಿ ಕಳ್ಳತನವಾಗಿರುವ ಬಗ್ಗೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದರೋಡೆಗೆ ಸಂಬಂಧಿಸಿದಂತೆ ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕ ಸಿ ಮಲ್ಲಿಕ್, ನಾಗೇಶ್ ಹಾಗೂ ನಂಜನಗೂಡಿನ ಡಿವೈಎಸ್ಪಿ ರಘು,ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಸಿ ಎಂ ರವೀಂದ್ರ, ಮಾರ್ಗದರ್ಶನದಂತೆ ತಂಡವನ್ನು ರಚನೆ ಮಾಡಿ, ಎಲ್ಲಾ ಆಯಾಮಗಳಲ್ಲೂ ಪತ್ತೆ ಕಾರ್ಯ ಮಾಡಿ ಚಾಮರಾಜನಗರ ಮೂಲದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ಮಾಡಲಾಗಿ, ಕಳೆದ ಡಿಸೆಂಬರ್ ತಿಂಗಳಲ್ಲಿ ನಗರದಲ್ಲಿ ಸರಣಿ ಅಂಗಡಿ ಕಳ್ಳತನಕ್ಕೆ ಸಂಬಂಧಿಸಿದಂತೆ 5 ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಯಿಂದ 26 ಗ್ರಾಂ ಚಿನ್ನಾಭರಣಗಳು, ಒಂದು ಟೈಟಾನ್ ವಾಚ್ ಹಾಗೂ 9700 ನಗದು, ಕಳ್ಳತನಕ್ಕೆ ಬಳಸಿದ್ದ ಬೈಕು, ಕಬ್ಬಿಣದ ರಾಡು ಹಾಗೂ ಕಟರ್ ಮಷೀನ್, ಎರಡು ಬ್ಯಾಟರಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸ್ಐ ಶಿವ, ಸತೀಶ್, ಅಬ್ದುಲ್ ಲತೀಪ್, ಅಶೋಕ,ಭಾಸ್ಕರ್, ಶ್ರೀನಿವಾಸ್, ಯು ಎಸ್ ಶಿವಕುಮಾರ್, ಮಹೇಶ್, ತಿಮ್ಮಯ್ಯ, ಚೇತನ್, ಚಾಲಕ ಕೃಷ್ಣ ಪಾಲ್ಗೊಂಡಿದ್ದರು.
Kshetra Samachara
10/03/2026 10:52 am
LOADING...