ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ದೇವಸ್ಥಾನದ ಆಸುಪಾಸು ಧಗ ಧಗ

ಮೈಸೂರು : ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನದ ಆಸುಪಾಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಕ್ತ ಬಾಂಧವರಲ್ಲಿ ಆತಂಕ ಮನೆ ಮಾಡಿತ್ತು. ದೇವಸ್ಥಾನದ ಪಕ್ಕದ ಪಾಳು ಬಿದ್ದಿರುವ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಏಕಾಏಕಿ ಜಾಸ್ತಿಯಾದ ಕಾರಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸಿದರು. ಯಾರೋ ಕಿಡಿಗೇಡಿಗಳು ಬೀಡಿ ಸೇದಿ ಬಿಸಾಕಿರುವ ಶಂಕೆ ವ್ಯಕ್ತವಾಗಿದ್ದು, ದೇವಸ್ಥಾನದ ಸುತ್ತಲೂ 200 ಮೀಟರ್ ಧೂಮಪಾನ ನಿಷೇಧ ಕಡ್ಡಾಯ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By :
PublicNext

PublicNext

21/03/2026 04:13 pm

Cinque Terre

5.69 K

Cinque Terre

0

ಸಂಬಂಧಿತ ಸುದ್ದಿ