ಉಡುಪಿ: ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಕಕ್ಕುಂಜೆ ನಿವಾಸಿ ಸೂರ್ಯಕಾಂತ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.
ಕಕ್ಕುಂಜೆ ವಾರ್ಡ್ ಸಾರ್ವಜನಿಕ ರಸ್ತೆಯಲ್ಲಿ ಸೂರ್ಯಕಾಂತ ಮಣ್ಣು ಹಾಕಿ ಸಾರ್ವಜನಿಕರಿಗೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತಡೆ ಉಂಟು ಮಾಡುತ್ತಿರುವ ಬಗ್ಗೆ ಸ್ಥಳೀಯರಾದ ಮೆಟಿಲ್ಲಾ ಡಯಾಸ್ ಕಕ್ಕುಂಜೆ ಮತ್ತು ಇತರರು ಪೌರಾಯುಕ್ತರಿಗೆ ದೂರು ನೀಡಿದ್ದರು. ರಸ್ತೆಯಲ್ಲಿ ಹಾಕಿರುವ ಮಣ್ಣನ್ನು ತೆರವುಗೊಳಿಸಲು ನಗರ ಸಭೆಯ ಸಹಾಯಕ ಅಭಿಯಂತರ ಚೇತನ್, ಕಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್ ಪ್ರಭು, ಕಂದಾಯ ನಿರೀಕ್ಷಕಿ ಶ್ರಾವ್ಯಾ, ತೆರಿಗೆ ವಸೂಲಿದಾರ ಸುಧಾಕರ ಕೋಟ್ಯಾನ್ ಅವರಿಗೆ ಪೌರಾಯುಕ್ತರು ಸೂಚನೆ ನೀಡಿದ್ದರು. ಅದರಂತೆ ಅಧಿಕಾರಿಗಳು ಪೌರ ಕಾರ್ಮಿಕ ರಾಘು ಅವರ ಜತೆ ರಸ್ತೆಯಲ್ಲಿರುವ ಮಣ್ಣನ್ನು ತೆರವುಗೊಳಿಸಲು ತೆರಳಿದ್ದರು. ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸೂರ್ಯಕಾಂತ ಸ್ಥಳದಲ್ಲಿದ್ದ ಅಧಿಕಾರಿಗಳು ನಿರ್ವಹಿಸುವ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/03/2026 02:43 pm
LOADING...