ಸುರತ್ಕಲ್ : ಗ್ರಾಮೀಣ ಪ್ರದೇಶಕ್ಕೆ ಮೂಲಭೂತ ಸೌಕರ್ಯಗಳಲ್ಲಿ , ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಚೇಳೈರು ಗ್ರಾ.ಪಂ. ವ್ಯಾಪ್ತಿಯ ಚೇಳೈರು ಹಾಗೂ ಚೇಳೈರು ಎಂ,ಅರ್,ಪಿ,ಎಲ್ ಕಾಲನಿಗೆ ಕೊಲ್ಯ ಎಂಬಲ್ಲಿ ಸುಮಾರು 55 ಲಕ್ಷ ವೆಚ್ಚದಲ್ಲಿ ಎಂ,ಅರ್,ಪಿ,ಎಲ್ ಸಂಸ್ಥೆಯ ಸಿಎಸ್‌ಆರ್ ವಿಭಾಗದಿಂದ ತೆರೆದ ಬಾವಿ ಹಾಗೂ ಪೈಪ್ ಲೈನ್ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು ಎಂ,ಅರ್,ಪಿ,ಎಲ್ ಸಂಸ್ಥೆಯು ಸಮುದಾಯ ಅಭಿವೃದ್ಧಿ ಯೋಜನೆಯಡಿ ನಡೆಸುವ ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದ್ದು ಪ್ರಯೋಜನ ಗ್ರಾಮಸ್ಥರು ಪಡೆಯಬೇಕು ಎಂದರು.
ವೇದಿಕೆಯಲ್ಲಿ ಎಂ,ಅರ್,ಪಿ,ಎಲ್ ಸಂಸ್ಥೆಯ ಎಚ್ ಅರ್ ವಿಭಾಗದ ಸಿ.ಜಿ.ಎಂ.ಮನೋಜ್ ಕುಮಾರ್, ಸಿಎಸ್‌ಆರ್ ವಿಭಾಗದ ಸಿ.ಜಿ.ಎಂ.ಸುದರ್ಶನ್, ಜಿ.ಎಂ.ಶ್ರೀನಿವಾಸ್, ಪ್ರಬಂಧಕರಾದ ಎಂ ಕೆ ರಾವ್,ಚೇಳೈರು ಗ್ರಾ ಪಂ ಮಾಜಿ ಅಧ್ಯಕ್ಷ ಜಯಾನಂದ ಚೇಳೈರು,ಪುಷ್ಪರಾಜ್ ಶೆಟ್ಟಿ ಮಧ್ಯ, ಮಾಜಿ ಉಪಾಧ್ಯಕ್ಷೆ ರೇಖಾ,ಬಾಲಕೃಷ್ಣ ಶೆಟ್ಟಿ, ಮಾಜಿ ಸದಸ್ಯರಾದ ಸುಕುಮಾರಿ,ಲತಾ,ಸುಧಾಕರ ಶೆಟ್ಟಿ, ಚರಣ್ ಕುಮಾರ್,ಚೇಳೈರು ಕಾಲನಿ ನಿರ್ವಸಿತರ ಸಮಿತಿಯ ಅಧ್ಯಕ್ಷ ವಸಂತಕುಲಾಲ್, ಕಾರ್ಯದರ್ಶಿ ವಿಶ್ವನಾಥ,ಸಮಾಜ ಸೇವಕ ಗಂಗಾಧರ ಪೂಜಾರಿ ಬಾಳ ಚೇಳೈರು ಕಾಲನಿ,ರಮೇಶ್ ಪೂಜಾರಿ ಚೇಳೈರು, ದಯಾನಂದ ಸುವರ್ಣ,ಎಸ್ ಎಸ್ ಮೂಲ್ಯ,ರಾಘವ ಸನೀಲ್,ಸತೀಶ್ ಮರವೂರು,ವಿಶ್ವನಾಥ ಆಚಾರ್ಯ,ನವೀನ್ ಕೋಟ್ಯಾನ್, ಪ್ರವೀಣ್ ಕೋಟ್ಯಾನ್, ವಸಂತ್ ಕಾಲನಿ,ಸುಗಂಧಿ ಮಧ್ಯ, ಯಾದವ್,ದಿನಕರ,ಗುತ್ತಿಗೆದಾರರಾದ ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.
PublicNext
21/03/2026 02:55 pm
LOADING...