ಹುಬ್ಬಳ್ಳಿ : ಉತ್ತರ ಕರ್ನಾಟಕದ ಪ್ರಸಿದ್ಧ ಮಠವಾದ ಶ್ರೀ ಜಗದ್ಗುರು 3000 ಮಠ ಮಹಾಸಂಸ್ಥಾನಕ್ಕೆ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡ ಮುಸ್ಲಿಂ ಸಮುದಾಯದ ಬಾಂಧವರು ಪವಿತ್ರ ರಂಜಾನ್ ಹಬ್ಬದಂದು ತಮ್ಮ ಸಾಂಪ್ರದಾಯದ ಪ್ರಾರ್ಥನೆಯನ್ನು ಮುಗಿಸಿಕೊಂಡು ನಂತರ ನೇರವಾಗಿ 3000 ಮಠಕ್ಕೆ ಬಂದು 3000 ಮಠದ ಪೀಠಾಧಿಪತಿಗಳ ದರ್ಶನ ಆಶೀರ್ವಾದ ಪಡೆದರು.
ಪೂಜ್ಯರು ಎಲ್ಲಾ ಮುಸ್ಲಿಂ ಬಾಂಧವರಿಗೂ ಫಲ ಪುಷ್ಪ ಸಮರ್ಪಣೆ ಮಾಡಿ ರಂಜಾನ್ ಹಬ್ಬದ ಶುಭಾಶಯ ಸಲ್ಲಿಸುವರು ಇಂತಹ ಸಂಪ್ರದಾಯ ನಿಜಕ್ಕೂ ಭಾವೈಕ್ಯತೆಯನ್ನು ಜಗತ್ತಿಗೆ ಸಾರುವ ಸಂದೇಶವಾಗಿದೆ.
3000 ಮಠದ ಜಗದ್ಗುರುಗಳವರ ಶಾಖ ಮಠದ ಕಾರ್ಯಕ್ರಮದ ನಿಮಿತ್ತವಾಗಿ ಬೇರಡೆ ನಿರ್ಗಮಿಸಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ಶಿವಮೊಗ್ಗ ಜಿಲ್ಲೆ, ಆನಂದಪುರದ ಜಗದ್ಗುರು ಮುರ್ಗಾಮಠದ ಪೂಜ್ಯ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಈ ಸಂದರ್ಭದಲ್ಲಿ ಇದ್ದು ಆಗಮಿಸಿದ ಮುಸ್ಲಿಂ ಸಮುದಾಯದ ಮುಖಂಡರಿಗೆ ಶುಭ ಕೋರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/03/2026 02:56 pm
LOADING...