ಅಥಣಿ: ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ - ಭಾಣಾಮತಿ ಸುಳ್ಳು, ಹುಲಿಕಲ್ ನಟರಾಜ್ ಪ್ರಯೋಗದಿಂದ ಬಯಲು!
ಅಥಣಿ: ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದ ಈಶ್ವರ ತೆಗ್ಗಿನ್ನವರ ಕುಟುಂಬದಲ್ಲಿ 'ಭಾಣಾಮತಿ ಶಂಕೆ' ಎಂಬ ವಿಚಾರವಾಗಿ ಕಳೆದ ಎಂಟು ದಿನಗಳ ಹಿಂದೆ 'ಪಬ್ಲಿಕ್ ನೆಕ್ಸ್ಟ್' ವರದಿಯೊಂದನ್ನು ಪ್ರಸಾರ ಮಾಡಿತ್ತು. ಈ ವರದಿ ಪ್ರಕಟವಾದ ಬೆನ್ನಲ್ಲೇ ಅಧಿಕಾರಿಗಳು ಕುಟುಂಬಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
'ಪಬ್ಲಿಕ್ ನೆಕ್ಸ್ಟ್' ವರದಿಯನ್ನು ಗಮನಿಸಿದ ಖ್ಯಾತ ವಿಜ್ಞಾನ ಚಿಂತಕ ಡಾ. ಹುಲಿಕಲ್ ನಟರಾಜ್ ಅವರು ಇಂದು ಅಥಣಿ ತಾಲೂಕಿನ ಕೌಲಗುಡ್ಡ ಗ್ರಾಮದ ಈಶ್ವರ ಕುಟುಂಬಕ್ಕೆ ಭೇಟಿ ನೀಡಿದರು. ಕುಟುಂಬದಲ್ಲಿ ಅಕಸ್ಮಿಕವಾಗಿ ಬೆಂಕಿ ಹತ್ತಿಕೊಳ್ಳುತ್ತದೆ ಎಂಬ ಆರೋಪದ ಕುರಿತು ಅವರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದರು.
ಈ ಪ್ರಯೋಗದಲ್ಲಿ ಯಾವುದೇ ಭಾಣಾಮತಿ ಇಲ್ಲ ಅದು ಸುಳ್ಳು, ಯಾವುದೇ ಘರ್ಷಣೆ ಇಲ್ಲದೆ ಬೆಂಕಿ ಹತ್ತಿಕೊಳ್ಳಲು ಸಾಧ್ಯವಿಲ್ಲ ಅದು ನೊಂದ ಮನಸ್ಸಿನ ಸ್ಥಿತಿ, ಈ ಕುಟುಂಬಕ್ಕೆ ಸರ್ಕಾರ ಮೌಢ್ಯತೆ ನಿರ್ಮೂಲನೆ ಕಾಯ್ದೆ ಅಡಿಯಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ ಎಂಬ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
ಖುದ್ದಾಗಿ ಡಾ!ಹುಲಿಕಲ್ ನಟರಾಜ್ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ಹಂಚಿಕೊಂಡಿದ್ದು ಹೀಗೆ,,,
PublicNext
23/03/2026 08:46 am
LOADING...