ಬೆಳಗಾವಿ: ಈ ವರ್ಷ ಬಿಸಿಲಿನ ತಾಪ ಹೆಚ್ಚಿದೆ. ಇದರಿಂದ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳು ಕಂಗಾಲಾಗಿವೆ. ಹಾಗಾಗಿ ಬಿಸಿಲಿನಿಂದ ಪ್ರಾಣಿಗಳನ್ನು ರಕ್ಷಿಸಲು ಮೃಗಾಲಯದಲ್ಲಿ ಸ್ಫಿಂಕ್ಲರ್, ಫಾಗರ್, ಐಸ್ ಕ್ಯೂಬ್ ಬಳಸಿ ಪ್ರಾಣಿಗಳಿಗೆ ಕೂಲ್ ಕೂಲ್ ವಾತಾವರಣ ಸೃಷ್ಟಿಸಲಾಗುತ್ತಿದೆ.
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಝೂನಲ್ಲಿನ ಬಿಸಿಲಿನ ತಾಪಮಾನದಿಂದ ಪ್ರಾಣಿಗಳಲ್ಲಿ ನಿರ್ಜಲೀಕರಣ ಭೀತಿ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಮೃಗಾಲಯದಲ್ಲಿ ಸಮರ್ ಪ್ರೋಟೋಕಾಲ್ ಜಾರಿಗೊಳಿಸಿದ್ದಾರೆ. ಮೃಗಾಲಯದ ಹುಲಿ, ಸಿಂಹ, ಚಿರತೆ, ಕೃಷ್ಣ ಮೃಗ ಸೇರಿ ಝೂನಲ್ಲಿರುವ 195ಕ್ಕೂ ಹೆಚ್ಚು ಪ್ರಾಣಿಗಳ ರಕ್ಷಣೆಗೆ ಮೃಗಾಲಯದ ಆವರಣದಲ್ಲಿ ಸ್ಫಿಂಕ್ಲರ್, ಫಾಗರ್, ಐಸ್ ಕ್ಯೂಬ್ ಬಳಸಿ ತಂಪು ವ್ಯವಸ್ಥೆ ಮಾಡಲಾಗಿದೆ. ನಿರ್ಜಲೀಕರಣ ತಪ್ಪಿಸಲು ಪ್ರಾಣಿಗಳಿಗೆ ಗ್ಲೂಕೋಸ್ ಮಿಶ್ರಣ ನೀರು ಸಹ ಕೊಡಲಾಗುತ್ತಿದೆ.
ಹುಲಿ, ಸಿಂಹ, ಚಿರತೆಗಳಿಗೆ ಪ್ರೋಸನ್ ಫುಡ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಜಿಂಕೆಗಳಿಗೆ ಮಡ್ಡ್ ಬಾತ್, ಪಕ್ಷಿಗಳಿಗೆ ಹಣ್ಣು, ಕರಡಿಗಳಿಗೆ ಜೇನುತುಪ್ಪದ ಜೊತೆ ತಂಪಾದ ಆಹಾರ ಪೂರೈಕೆಯಾಗುತ್ತಿದೆ. ಪ್ರಾಣಿಗಳ ಕುಡಿಯುವ ನೀರಿನ ಹೊಂಡದಲ್ಲಿ ಐಸ್ ಕ್ಯೂಬ್ ಮಿಶ್ರಣ ಮಾಡಿ ಕುಡಿಯಲು ಸಹ ತಂಪು ತಂಪು ನೀರು ನೀಡಲಾಗುತ್ತಿದೆ.
ಒಟ್ಟಿನಲ್ಲಿ ಮೃಗಾಲಯದ ಪ್ರಾಣಿಗಳ ಮೇಲೆ ಬೆಳಗಾವಿ ಎಸಿಎಫ್ ನಾಗರಾಜ್ ಬಾಳೇಹೊಸರು ನೇತೃತ್ವದಲ್ಲಿ ನಿಗಾ ಇಡಲಾಗಿದ್ದು, ಕಳೆದ ವರ್ಷದ ಚಳಿಗಾಲದಲ್ಲಿ ನಡೆದ 31 ಕೃಷ್ಣ ಮೃಗಗಳ ಸಾವಿನ ದುರಂತದ ಬಳಿಕ ಹೆಚ್ಚಿನ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
PublicNext
28/04/2026 03:11 pm
LOADING...