ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಪ್ಪನಾಡು ಕ್ಷೇತ್ರಕ್ಕೆ ಆಗಮಿಸಿದ ರಾಮ ಹನುಮ ಜ್ಯೋತಿ ರಥಯಾತ್ರೆ- ಭವ್ಯ ಸ್ವಾಗತ

ಮುಲ್ಕಿ:ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅಯೋಧ್ಯೆಯ ಮಂದಿರದಲ್ಲಿ ಬೆಳಗುವ ಜ್ಯೋತಿ, ಗಂಗಾಜಲ ಹಾಗೂ ಅಯೋಧ್ಯೆ ಪುಣ್ಯ ಮೃತ್ತಿಕೆಯನ್ನೊಳಗೊಂಡ ರಥ ಮುಲ್ಕಿಯ ಬಪ್ಪನಾಡು ಕ್ಷೇತ್ರದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭ ಕ್ಷೇತ್ರದ ಅರ್ಚಕ ಪ್ರಸಾದ್ ಭಟ್ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು ರಥ ಆಗಮಿಸುವ ಸಂದರ್ಭ ಶ್ರೀ ರಾಮ ತಾರಕ ಜಪ ,ಹನುಮಾನ್ ಚಾಲಿಸಾ ಹಾಗೂ ಭಜನೆ ಮಾಡಿ ಸ್ವಾಗತಿಸಲಾಯಿತುಈ ಸಂದರ್ಭ ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಅಭಿವೃದ್ಧಿ ಸಮಿತಿಯ ಸುನಿಲ್ ಆಳ್ವ, ನಿವೃತ್ತ ಉಪನ್ಯಾಸಕ ವೈ ಎನ್ ಸಾಲ್ಯಾನ್ , ವಿಶ್ವನಾಥ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್ ವರ್ಮ, ಭಾನುಮತಿ ಶೆಟ್ಟಿ ಕಕ್ವಗುತ್ತು,ಮುಲ್ಕಿ ನಪಂ ಮಾಜಿ ಅಧ್ಯಕ್ಷ ಸತೀಶ್ ಅಂಚನ್,ಮಾಜಿ ಸದಸ್ಯರಾದ ಪುರುಷೋತ್ತಮ ಬಡಗುಹಿತ್ಲು, ಹರ್ಷ ರಾಜ ಶೆಟ್ಟಿ, ಶೈಲೇಶ್ ಕುಮಾರ್,ಸುಭಾಷ್ ಶೆಟ್ಟಿ, ಈರಣ್ಣ ಅರಳಗುಂಡಿ, ಪ್ರಶಾಂತ್ ಕೆಎಸ್ ರಾವ್ ನಗರ, ನವೀನ್ ರಾಜ್, ವಕೀಲ ರವೀಶ್ ಕಾಮತ್, ರೋಹಿಣಿ ಶೆಟ್ಟಿ, ರಮೇಶ್ ಮೆಸ್ಕಾಂ ಬಪ್ಪನಾಡುಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

02/04/2026 11:56 am

Cinque Terre

644

Cinque Terre

0

ಸಂಬಂಧಿತ ಸುದ್ದಿ