ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಟ್ರಾಫಿಕ್ : ಗ್ಯಾಸ್ ಬಂಕ್‌ಗಳಿಗೆ ಪೊಲೀಸ್ ಶಾಕ್, ಪೀಕ್ ಅವರ್‌ನಲ್ಲಿ ಬಂದ್‌ಗೆ ಆದೇಶ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎಲ್‌ಪಿಜಿ ಗ್ಯಾಸ್‌ಗಾಗಿ ಆಟೋ ಚಾಲಕರು ಪರದಾಡುತ್ತಿದ್ದು, ಗ್ಯಾಸ್ ಸ್ಟೇಷನ್‌ಗಳ ಮುಂದೆ ಆಟೋಗಳು ರಸ್ತೆಗಳಲ್ಲಿ ಸಾಲಾಗಿ ನಿಲ್ಲುವುದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ.

ಈ ಸಮಸ್ಯೆಗೆ ಕಡಿವಾಣ ಹಾಕಲು ಶೇಷಾದ್ರಿಪುರಂ ಸಂಚಾರ ಪೊಲೀಸರು ಶೇಷಾದ್ರಿಪುರಂ ಫ್ಲಾಟ್‌ಫಾರಂ ರಸ್ತೆಯಲ್ಲಿರುವ 'ಕೃಷ್ಣ ಆಟೋ ಗ್ಯಾಸ್ ಸ್ಟೇಷನ್'ಗೆ ನೋಟಿಸ್ ಜಾರಿ ಮಾಡಿದ್ದಾರೆ. ಗ್ಯಾಸ್ ಬಂಕ್‌ಗೆ ಬರುವ ಆಟೋಗಳು ರಸ್ತೆಯಲ್ಲಿ ನಿಲ್ಲಿಸುವುದರಿಂದ ಉಂಟಾಗುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ನೋಟಿಸ್‌ನಲ್ಲಿ, ಗ್ಯಾಸ್ ಸ್ಟೇಷನ್ ತಮ್ಮ ಆವರಣದಲ್ಲಿಯೇ ಆಟೋಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು ಮತ್ತು ರಸ್ತೆಯಲ್ಲಿ ಆಟೋಗಳು ಸರದಿಯಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಬೆಳಗ್ಗೆ 8 ರಿಂದ 11 ಗಂಟೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಗ್ಯಾಸ್ ಸ್ಟೇಷನ್ ಮುಚ್ಚಲು ಸೂಚನೆ ನೀಡಲಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಸ್ಟೇಷನ್ ತೆರೆದರೆ, ಬಿಎನ್‌ಎಸ್ 285 ಅಡಿಯಲ್ಲಿ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶೇಷಾದ್ರಿಪುರಂ ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Edited By : Vinayak Patil
PublicNext

PublicNext

04/04/2026 12:21 pm

Cinque Terre

9.84 K

Cinque Terre

0

ಸಂಬಂಧಿತ ಸುದ್ದಿ