ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ರಾಜ ಕಾಲುವೆ ಅತಿಕ್ರಮಣ ತೆರವಿಗೆ ಆಗ್ರಹ

ಶಿವಮೊಗ್ಗ : ರಾಜ ಕಾಲುವೆ ಅತಿಕ್ರಮಣ ತೆರವಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಸವಳಂಗ ರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿ ಇರುವ ರಾಜ ಕಾಲುವೆ ಜಾಗವನ್ನು ಅತಿಕ್ರಮಿಸಿಕೊಂಡು ನರ್ಸಿಂಗ್ ಹೋಂ ಕಟ್ಟಡ ಕಟ್ಟಿದ್ದಾರೆ. ಈ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ, ಹಾಗೂ ಡಿಹೆಚ್‌ಓ ಇಲಾಖೆಯಿಂದ ನಿಯಮಗಳನ್ನು ಉಲ್ಲಂಘಿಸಿ ಪರವಾನಿಗೆ ನೀಡಲಾಗಿದೆ. ಇದು ಮಳೆ ನೀರಿನ ಒಳ ಹರಿವಿಗೂ ಅಡ್ಡಿಯಾಗಿದೆ. ಕಸ ಹಾಗೂ ಇತರೆ ತ್ಯಾಜ್ಯಗಳು ರಾಜ ಕಾಲುವೆಯಿಂದ ಆಚೆ ಬರುತ್ತಿದೆ. ಅಲ್ಲದೆ ಸಾಮಾನ್ಯ ರೋಗಿಗಳಿಗೂ ಕೂಡ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಕೂಡ ಸುರಕ್ಷಿತವಾಗಿಲ್ಲ. ಆದ್ದರಿಂದ ಈ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ನರ್ಸಿಂಗ್ ಹೋಂ ತೆರೆಯಲು ಕೆಪಿಎಂಇ ನೋಂದಣಿ ಪ್ರಮಾಣವನ್ನು ರದ್ದುಗೊಳಿಸಬೇಕು. ರೋಗಿಗಳ ಹಿತದೃಷ್ಠಿಯಿಂದಾದರೂ ಈ ನಸಿಂಗ್ ಹೋಂನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಮೇಸ್ಕಾಂ ಇಲಾಖೆಯು ಕೂಡ ವಿದ್ಯುತ್ ಸಂಪರ್ಕ ನೀಡಿರುವುದು ಕೂಡ ಸರಿಯಿಲ್ಲ. ಕೂಡಲೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಬೇಕು. ಮಹಾನಗರ ಪಾಲಿಕೆ ಆಯುಕ್ತರು ಜಿಲ್ಲಾ ಆರೋಗ್ಯಾಧಿಕಾರಿಗಳು, ಮೇಸ್ಕಾಂ ಅಧಿಕಾರಿಗಳು, ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಲೋಕಾಯುಕ್ತರ ತನಿಖೆಗಾಗಿ ದೂರು ನೀಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕಿರಣ್‌ಕುಮಾರ್ ಹೆಚ್.ಎಸ್. ಸೇರಿದಂತೆ ಹಲವರಿದ್ದರು.

Edited By : PublicNext Desk
Kshetra Samachara

Kshetra Samachara

04/04/2026 04:29 pm

Cinque Terre

380

Cinque Terre

0

ಸಂಬಂಧಿತ ಸುದ್ದಿ