ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಬಾಬು ಜಗಜೀನರಾಂ ಶೋಷಿತ ವರ್ಗದ ದಾರಿದೀಪ : ಎಸ್.ಎನ್.ಚನ್ನಬಸಪ್ಪ

ಶಿವಮೊಗ್ಗ : ಬಾಬು ಜಗಜೀವನ್ ರಾಮ್ ರವರು ಶೋಷಿತ ವರ್ಗದವರ ದಾರಿದೀಪವಾಗಿದ್ದು, ಸಮಾಜದ ಬೆಳವಣಿಗೆಗಾಗಿ ಶ್ರಮಿಸಿದ ಶ್ರೇಷ್ಠವ್ಯಕ್ತಿ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಡಾ. ಬಾಬು ಜಗಜೀವನ್ ರಾಮ್ ರವರ 119 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಗಜೀವನ್ ರಾಮ್ ಅವರು ಕೇವಲ ರಾಜಕಾರಣಿಯಾಗಿರದೆ, ದಲಿತರ ಮತ್ತು ಶೋಷಿತರ ಹಕ್ಕುಗಳಿಗಾಗಿ ಶ್ರಮಿಸಿದ ಮಹಾನ್ ನಾಯಕ.

ಬಾಬೂಜಿರವರು ದೇಶಕ್ಕೆ ಪೂರಕವಾದ ನಿಲುವುಗಳನ್ನು ತಂದು ಕೊಟ್ಟ ಶ್ರೇಷ್ಠ ವ್ಯಕ್ತಿ. ಮಲಹೊರುವ ಅನಿಷ್ಟ ಪದ್ಧತಿ ನಿಷೇಧಿಸುವಲ್ಲಿ ಅಗ್ರಗಣ್ಯರಾಗಿ ನಿಂತವರು. ದಲಿತ ಸಮುದಾಯದಿಂದ ಬಂದು ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದ ಇವರು, ಸಮಾನತೆಗಾಗಿ ನಡೆಸಿದ ಹೋರಾಟ ಅವಿಸ್ಮರಣೀಯವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಹಾಗೂ ಅವರ ಆಶಯಗಳನ್ನು ಮುಂದೆ ತೆಗೆದುಕೊಂಡು ಹೋಗಬೇಕು ಎಂದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಯಾವುದೇ ವ್ಯಕ್ತಿಯನ್ನು ಸಂಕುಚಿತ ಮನೋಭಾವನೆಯಿಂದ ನೋಡಬಾರದು.‌ ಶೋಷಿತರ ಧ್ವನಿಯಾಗಿದ್ದ ಬಾಬೂಜಿಯವರನ್ನು ನಾವು ಸಮಾಜದ ಶ್ರೇಷ್ಠ ವ್ಯಕ್ತಿಯನ್ನಾಗಿ ಸ್ವೀಕರಿಸಿ ಅವರ ತತ್ವಗಳು, ಕೊಡುಗೆಗಳನ್ನು ಮಾರ್ಗಸೂಚಿಗಳಾಗಿ ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ದೇಶ ಕಟ್ಟುವ ಕಾರ್ಯದಲ್ಲಿ ಒಗ್ಗೂಡಿ ದೇಶವನ್ನು ಮುನ್ನಡೆಸಬೇಕು ಎಂದರು.

Edited By : PublicNext Desk
Kshetra Samachara

Kshetra Samachara

05/04/2026 04:13 pm

Cinque Terre

100

Cinque Terre

0

ಸಂಬಂಧಿತ ಸುದ್ದಿ