ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಕಾರಿಪುರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಶಿಕಾರಿಪುರ : ತಾಲೂಕಿನ ಅಂಜನಾಪುರ ಹೋಬಳಿ ಕಲ್ಮನೆ ಗ್ರಾಮ ಸಮೀಪದ ಕೊಪ್ಪದ ಕೆರೆ ಮತ್ತು ಹೊಸ ಪಂಪ್ ಹೌಸ್ ಬಳಿ ಚಿರತೆ ಕಾಣಿಸಿಕೊಂಡಿದೆ.

ಕಲ್ಮನೆಯ ಪ್ರವೀಣ್ ಎಂಬುವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಚಿರತೆ ಓಡಾಡುವುದು ಕಂಡು ಬಂದಿದೆ. ತಕ್ಷಣ ಮೊಬೈಲ್ ನಲ್ಲಿ ಫೋಟೋ ಸೆರೆ ಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.

ಈ ಹಿಂದೆ ಹಲವಾರು ಬಾರಿ ಶಿಕಾರಿಪುರ ಸುತ್ತಮುತ್ತ ಹುಲಿ ಹಾಗೂ ಚಿರತೆಗಳು ಕಾಣಿಸಿಕೊಂಡಿದ್ದು ಮತ್ತೊಮ್ಮೆ ಚಿರತೆ ಕಾಣಿಸಿಕೊಂಡ ಪರಿಣಾಮ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

Edited By : PublicNext Desk
PublicNext

PublicNext

05/04/2026 09:24 am

Cinque Terre

7.1 K

Cinque Terre

0

ಸಂಬಂಧಿತ ಸುದ್ದಿ