ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಸೋಲಾಪುರದಲ್ಲಿ ಭೀಕರ ಅಪಘಾತ - ಟ್ರಕ್ ಬ್ಲೈಂಡ್ ಸ್ಪಾಟ್‌ನಿಂದ ಇಬ್ಬರು ಬೈಕ್ ಸವಾರರ ದಾರುಣ ಸಾವು

ಸೋಲಾಪುರ (ಮಹಾರಾಷ್ಟ್ರ): ರಸ್ತೆಯಲ್ಲಿ ಚಲಿಸುವಾಗ ಸಣ್ಣ ನಿರ್ಲಕ್ಷ್ಯವೂ ಪ್ರಾಣಕ್ಕೆ ಮುಳುವಾಗಬಲ್ಲದು ಎಂಬುದಕ್ಕೆ ಮಹಾರಾಷ್ಟ್ರದ ಸೋಲಾಪುರ ನಗರದ ಬೊರಾಮಣಿ ನಾಕಾ ಬಳಿ ನಡೆದ ಘಟನೆಯೇ ಸಾಕ್ಷಿ. ವೇಗವಾಗಿ ಬಂದ ಟ್ರಕ್ ಅಡಿಯಲ್ಲಿ ಸಿಲುಕಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸೋಲಾಪುರದ ಬೊರಾಮಣಿ ನಾಕಾ ವೃತ್ತದಲ್ಲಿ ಟ್ರಕ್ ಒಂದು ತಿರುವು ಪಡೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಬೊರಾಮಣಿ ನಿವಾಸಿಗಳಾದ ಸೈಫನ್ ಪಟೇಲ್ (43) ಮತ್ತು ಹುಜೂರ್ ಪಟೇಲ್ (35) ಎಂದು ಗುರುತಿಸಲಾಗಿದೆ. ವೃತ್ತಿಪರ ಅಡುಗೆಯವರಾಗಿದ್ದ ಇಬ್ಬರು ಕೆಲಸಕ್ಕಾಗಿ ಬೈಕ್‌ನಲ್ಲಿ ತೆರಳುತ್ತಿದ್ದರು. ಸಿಸಿ ಟಿವಿ ದೃಶ್ಯಾವಳಿಗಳ ಪ್ರಕಾರ, ಟ್ರಕ್ ಎಡಭಾಗಕ್ಕೆ ತಿರುವು ಪಡೆಯುತ್ತಿದ್ದಾಗ, ಬೈಕ್ ಸವಾರರು ಅದನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದ್ದಾರೆ.

ಟ್ರಕ್ ಚಾಲಕನಿಗೆ ತನ್ನ ವಾಹನದ ಪಕ್ಕದಲ್ಲಿ ಚಲಿಸುವ ಸಣ್ಣ ವಾಹನಗಳು ಕಾಣಿಸದ ಪ್ರದೇಶವನ್ನು 'ಬ್ಲೈಂಡ್ ಸ್ಪಾಟ್' ಎನ್ನಲಾಗುತ್ತದೆ. ಈ ಘಟನೆಯಲ್ಲಿಯೂ ಸಹ

ಟ್ರಕ್ ಚಾಲಕ ತಿರುವು ಪಡೆಯುವಾಗ ಬೈಕ್ ಸವಾರರು ಅವನಿಗೆ ಕಾಣಿಸದ 'ಡೆಡ್ ಝೋನ್' ಅಥವಾ ಬ್ಲೈಂಡ್ ಸ್ಪಾಟ್‌ನಲ್ಲಿದ್ದರು.

ಟ್ರಕ್ ತಿರುಗುತ್ತಿರುವುದನ್ನು ಗಮನಿಸದೆ ಸವಾರರು ತೀರಾ ಹತ್ತಿರದಿಂದ ಓವರ್‌ಟೇಕ್ ಮಾಡಲು ಮುಂದಾಗಿದ್ದು, ದಾರುಣ ಸಾವಿಗೆ ಕಾರಣವಾಯಿತು.

Edited By : Nagaraj Tulugeri
PublicNext

PublicNext

06/04/2026 05:49 pm

Cinque Terre

22.55 K

Cinque Terre

0

ಸಂಬಂಧಿತ ಸುದ್ದಿ