ಕಲ್ಪಾಕ್ಕಂ: ಭಾರತದ ಅಣುಶಕ್ತಿ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ತಮಿಳುನಾಡಿನ ಕಲ್ಪಾಕ್ಕಂನಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತ ‘ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್’ (PFBR) ಯಶಸ್ವಿಯಾಗಿ ಕಾರ್ಯಾರಂಭಗೊಂಡಿದ್ದು, ದೇಶದ ಇಂಧನ ಸ್ವಾವಲಂಬನೆಗೆ ಹೊಸ ದಿಕ್ಕು ನೀಡಿದೆ. ಇದು ಕೇವಲ ಯೋಜನೆಯ ಆರಂಭವಲ್ಲ, ಭಾರತದ ವೈಜ್ಞಾನಿಕ ಸಾಮರ್ಥ್ಯದ ಘೋಷಣೆಯಾಗಿದೆ.
ಮೂರು ಹಂತದ ಅಣುಶಕ್ತಿ ಯೋಜನೆಯ ಎರಡನೇ ಹಂತಕ್ಕೆ ಭಾರತ ಕಾಲಿಟ್ಟಿರುವ ಈ ಕ್ಷಣ ಅತ್ಯಂತ ಮಹತ್ವದ್ದು. PFBR ವಿಶೇಷತೆ ಎಂದರೆ, ಇದು ಬಳಸುವ ಇಂಧನಕ್ಕಿಂತ ಹೆಚ್ಚು ಇಂಧನವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ‘ಬ್ರೀಡರ್’ ತಂತ್ರಜ್ಞಾನ ಭವಿಷ್ಯದಲ್ಲಿ ಥೋರಿಯಂ ಆಧಾರಿತ ಮೂರನೇ ಹಂತದ ಯೋಜನೆಗೆ ಬಲವಾದ ಅಡಿಪಾಯವಾಗಲಿದೆ.
ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿತ ಈ ರಿಯಾಕ್ಟರ್, ಭಾರತೀಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಪ್ರತಿಭೆಗೆ ಜೀವಂತ ಸಾಕ್ಷಿ. ‘ಆತ್ಮನಿರ್ಭರ ಭಾರತ’ದ ಕನಸಿಗೆ ಮತ್ತೊಂದು ಬಲ ತುಂಬಿದ ಕ್ಷಣ ಇದು.
ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿ, ಇದು ದೇಶದ ಅಣುಶಕ್ತಿ ಪಯಣದಲ್ಲಿ ನಿರ್ಣಾಯಕ ಹೆಜ್ಜೆ ಎಂದು ಹೇಳಿದ್ದಾರೆ. ರಷ್ಯಾದ ನಂತರ ಇಂತಹ ತಂತ್ರಜ್ಞಾನ ಹೊಂದಿದ ವಿಶ್ವದ ಎರಡನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದ್ದು, ಇಂಧನ ಭದ್ರತೆ ಮತ್ತು ಜಾಗತಿಕ ನಾಯಕತ್ವದತ್ತ ದಿಟ್ಟ ಹೆಜ್ಜೆ ಇಟ್ಟಿದೆ.
PublicNext
07/04/2026 01:02 pm
LOADING...