ಮಂಗಳೂರು: ಸದ್ಯ ದ.ಕ.ಜಿಲ್ಲೆಯ ಗಡಿಭಾಗ ಕೇರಳದಲ್ಲಿ ವಿಧಾನಸಭೆ ಚುನಾವಣಾ ಕಾವು ಜೋರಾಗಿದೆ. ಎ.9ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ 11ವರ್ಷದ ಬಾಲಕಿಯೊಬ್ಬಳು ಕಾಸರಗೋಡು ಜಿಲ್ಲೆಯಾದ್ಯಂತ ಸಂಚರಿಸಿ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಜನಜಾಗೃತಿ ಮೂಡಿಸುತ್ತಿದ್ದಾಳೆ.
ಮಂಗಳೂರಿನ ಬಂಟ್ವಾಳ ನಿವಾಸಿ ಸನ್ನಿಧಿ ಕಶೆಕೋಡಿ ಜನಜಾಗೃತಿ ಮೂಡಿಸುತ್ತಿರುವ ಬಾಲಕಿ. ಈಕೆ ಬಸ್ ನಿಲ್ದಾಣ, ಅಂಗಡಿಮುಂಗಟ್ಟು, ಬಸ್ ನಿಲ್ದಾಣ ಹೀಗೆ ಜನರಿರುವ ಸ್ಥಳಕ್ಕೆ ತೆರಳಿ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾಳೆ. ಈಕೆಯ ಕಾರ್ಯಕ್ಕೆ ಕಾಸರಗೋಡು ಜಿಲ್ಲಾ ಕಲೆಕ್ಟರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐದು ಭಾಷೆಗಳನ್ನು ಕಲಿತಿರುವ ಸನ್ನಿಧಿ ಕಶೆಕೋಡಿ ದೆಹಲಿ, ಗೋವಾ, ಕೇರಳ , ಕರ್ನಾಟಕ ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಸಂದರ್ಭದಲ್ಲೂ ಇದೇ ರೀತಿ ಮತದಾನದ ಜಾಗೃತಿ ಮೂಡಿಸಿ ಪ್ರಶಂಸೆ ಗಳಿಸಿದ್ದಾಳೆ. ಪ್ರಸ್ತುತ 6ನೇ ತರಗತಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಪೆರಾಜೆ ಮಾಣಿ ಬಂಟ್ವಾಳ ಕಲಿಯುತ್ತಿದ್ದಾಳೆ. ಈಕೆ ಲೋಕೇಶ್ ಗೌಡ ಕಶೆಕೋಡಿ ಹಾಗೂ ಶೀಲಾವತಿ ದಂಪತಿಗಳ ಪುತ್ರಿ.
PublicNext
07/04/2026 04:45 pm
LOADING...