ಮಂಗಳೂರು: ನಗರಿಯಲ್ಲಿ ಹಲಸಿನ ಹಣ್ಣು, ಹಲಸೊನ ಗಿಡಗಳಿಗೇನು ಕಡಿಮೆಯಿಲ್ಲ. ಆದರೆ ನಗರದ ಸರ್ವೇಶ್ ರಾವ್ ಎಂಬ ವಿಶೇಷ ಹಣ್ಣಿನ ಮರಗಳ ಆಸಕ್ತರೋರ್ವರು ಥೈಲ್ಯಾಂಡ್‌ನಿಂದ ತಂದ ಗಿಡವನ್ನು ಬೆಳೆಸಿ ಇದೀಗ ಹಣ್ಣಿನ ಸ್ವಾದವನ್ನು ಆಸಕ್ತರಿಗೆ ಹಂಚಿದ್ದಾರೆ.
ಸರ್ವೇಶ್ ರಾವ್ ಗಿಡಗಳ ಆಸಕ್ತರು ಮಾತ್ರವಲ್ಲ, ಗಾಳಿಪಟ ಹಾರಿಸುವ ಉಮೇದು ಇರುವವರು. ಹೀಗಾಗಿ ಅವರು ತಮ್ಮ ತಂಡದೊಂದಿಗೆ 2018ರಲ್ಲಿ ಥೈಲ್ಯಾಂಡ್‌ಗೆ ಗಾಳಿಪಟ ಉತ್ಸವಕ್ಕೆ ಹೋಗಿದ್ದರು. ಹೀಗೆ ಹೋದವರು ಥೈಲ್ಯಾಂಡ್‌ನ ವಿಶೇಷ ಹಲಸು ಪೆಟ್ ಡ್ರಾಮ್ ರೋಂಗ್‌ನ ತಳಿಯ ಕೊಂಬೆಗಳನ್ನು ತಂದು ಕೂಳೂರಿನ ತಮ್ಮ ನರ್ಸರಿಯಲ್ಲಿ ಕಸಿ ಕಟ್ಟಿ ಬೆಳೆಸಿದ್ದರು. ಇದೀಗ ಐದಾರು ಗಿಡಗಳಲ್ಲಿ ಹಣ್ಣು ಬಿಟ್ಟಿದೆ. ಹಣ್ಣನ್ನು ಆಸಕ್ತ ಹಲಸು ಪ್ರಿಯರಿಗೆ ಹಂಚಿದ್ದಾರೆ. ಹಣ್ಣಿನ ಸ್ವಾದಕ್ಕೆ ಮಾರು ಹೋದ ಕೆಲವರು ಇದರ ಕಸಿಕಟ್ಟಿದ ಗಿಡಗಳನ್ನು ತಮ್ಮೊಂದಿಗೆ ಒಯ್ದಿದ್ದಾರೆ.
ಈ ಹಣ್ಣಿನ ಸ್ವಾದವನ್ನು ಅನುಭವಿಸಬೇಕೆಂದೇ ಬೆಂಗಳೂರಿನಿಂದ ವೀಣಾ ಎಂಬವರು ಬಂದಿದ್ದಾರೆ. ಜೊತೆಗೆ ಇದರ ಗಿಡಗಳನ್ನು ತೆಗೆದುಕೊಂಡಿದ್ದಾರೆ. ಈ ಸಸಿಯು ಮೂರು ವರ್ಷಗಳಲ್ಲಿ ಕಾಯಿ ಬಿಡುತ್ತದೆ ಎಂದು ಸರ್ವೇಶ್ ರಾವ್ ಹೇಳುತ್ತಾರೆ.
ಹೊಸ ತಳಿಯ ಹಣ್ಣಿನ ಗಿಡಗಳನ್ನು ಪರಿಚಯಿಸುವ ಮೂಲಕ ಸರ್ವೇಶ್ ರಾವ್ ಅವರು ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗ ನಡೆಸುತ್ತಿದ್ದಾರೆ. ಹವ್ಯಾಸವಾಗಿ ಆರಂಭವಾದ ಈ ಕಾರ್ಯ ಇಂದು ಹಲವಾರು ಜನರಿಗೆ ಹೊಸ ಅನುಭವ ನೀಡುತ್ತಿದ್ದು, ಮಂಗಳೂರಿನಲ್ಲಿ ಥೈಲ್ಯಾಂಡ್ ಹಲಸಿನ ಗಿಡಗಳ ಬಗ್ಗೆ ಆಸಕ್ತಿ ಮೂಡಿಸಿದೆ.
PublicNext
06/04/2026 04:02 pm
LOADING...