ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ​ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳ ಮತಾಂತರ: ವಿಹೆಚ್‌ಪಿ ಆಕ್ರೋಶ

ಚಿಕ್ಕಮಗಳೂರು: ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ನಾಸಿಕ್ ಪ್ರಕರಣವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರೀತಿ ಮತ್ತು ಪ್ರೇಮದ ನೆಪದಲ್ಲಿ ಹಿಂದೂ ಯುವತಿಯರನ್ನು ನಂಬಿಸಿ, ಅವರಿಗೆ ದನದ ಮಾಂಸವನ್ನು ತಿನ್ನಿಸಿ ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಮತಾಂತರ ಮಾಡಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಗಂಭೀರ ಆರೋಪ ಮಾಡಿದರು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸ್ಥಾಪನೆಯಾದ ದಿನದಿಂದಲೂ ಲವ್ ಜಿಹಾದ್ ಹಾಗೂ ಲ್ಯಾಂಡ್ ಜಿಹಾದ್‌ನಂತಹ ಅಪಾಯಗಳ ಬಗ್ಗೆ ಸಮಾಜಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದ್ದೇವೆ ಎಂದು ತಿಳಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಯುವಕರು ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸುವುದು ಮತ್ತು ಪಾಕಿಸ್ತಾನಕ್ಕೆ ಜೈಕಾರ ಹಾಕುವ ಮೂಲಕ ದೇಶದ್ರೋಹಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ ರಂಗನಾಥ್, ಹಿಂದೂ ಹೆಣ್ಣು ಮಕ್ಕಳನ್ನು ಮತಾಂತರ ಮಾಡಲು ಗಾಂಜಾ, ಡ್ರಗ್ಸ್ ಹಾಗೂ ವಿವಿಧ ಮಾಫಿಯಾಗಳನ್ನು ಬಳಸಲಾಗುತ್ತಿದೆ ಎಂದು ದೂರಿದರು. ಮುಸ್ಲಿಂ ಯುವಕರು ತಮ್ಮ ಮನೆಯ ಅಕ್ಕ-ತಂಗಿಯರ ಮೂಲಕ ಹಿಂದೂ ಯುವತಿಯರ ಸ್ನೇಹ ಬೆಳೆಸಿ, ನಂತರ ಜಿಮ್‌ಗಳಿಗೆ ಕರೆದೊಯ್ದು ಮಾದಕ ದ್ರವ್ಯಗಳನ್ನು ನೀಡುವ ಮೂಲಕ ಮತಾಂತರದ ಸಂಚು ರೂಪಿಸುತ್ತಿದ್ದಾರೆ ಎಂದು ಅವರು ಪ್ರತಿಭಟನೆಯಲ್ಲಿ ಎಚ್ಚರಿಸಿದರು.

Edited By : PublicNext Desk
Kshetra Samachara

Kshetra Samachara

25/04/2026 09:35 pm

Cinque Terre

1.78 K

Cinque Terre

0

ಸಂಬಂಧಿತ ಸುದ್ದಿ