ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ನೂರಾನಿ ಮಸೀದಿ ಬಳಿ ಅಕ್ರಮ ಮಾಂಸ ಮಾರಾಟ: ಒಬ್ಬನ ಬಂಧನ

ಚಿಕ್ಕಮಗಳೂರು: ನಗರದ ನೂರಾನಿ ಮಸೀದಿ ಮುಂಭಾಗದ ರಸ್ತೆಯಲ್ಲಿರುವ ಫಯಾಜ್ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಶಂಕರಪುರ ನಿವಾಸಿ ಮಹಮ್ಮದ್ ಬಿಲಾಲ್ (48) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಸವನಹಳ್ಳಿ ಪೊಲೀಸರು, ಸುಮಾರು 60 ಕೆ.ಜಿ. ದನದ ಮಾಂಸ ಸೇರಿದಂತೆ ತಲೆಬುರುಡೆ, ಕಬ್ಬಿಣದ ತಕ್ಕಡಿ, ಕತ್ತಿ ಹಾಗೂ ಮಾಂಸ ನೇತು ಹಾಕುವ ಹುಕ್ಕುಗಳನ್ನು ವಶಪಡಿಸಿಕೊಂಡಿದ್ದಾರೆ. ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

26/04/2026 09:19 pm

Cinque Terre

3.48 K

Cinque Terre

0

ಸಂಬಂಧಿತ ಸುದ್ದಿ