ಧಾರವಾಡ : ಗುಡುಗು ಸಿಡಿಲು ಸಹಿತ ಧಾರವಾಡದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದ ಬೃಹತ್ ಆಕಾರದ ಗಿಡ ಮರಗಳು ಬಿದ್ದು ಹಾನಿಯಾಗಿದೆ.
ಹಾನಿಯಾದ ಸ್ಥಳಗಳಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಭಾರೀ ಗಾಳಿ ಬೀಸಿ ಅನೇಕ ಮರಗಳು ಮನೆಗಳ ಮೇಲೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಧಾರವಾಡದ ಕಮಲಾಪುರ, ಕೋಟಿ ಓಣಿ, ಹರಿಜನ ಕೇರಿ ಪ್ರದೇಶಕ್ಕೆ ಭೇಟಿ ನೀಡಿ, ಬಿದ್ದಿರುವ ಮರಗಳನ್ನು ವೀಕ್ಷಿಸಿದರು.
ತಕ್ಷಣವೇ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ತುರ್ತು ಕ್ರಮ ಕೈಗೊಂಡು ಮರಗಳನ್ನು ತೆರವುಗೊಳಿಸಲು ಸೂಚಿಸಿದರು.ಈ ವೇಳೆ ಸೋಮು ಉಡಕೇರಿ, ರಾಜಶೇಖರ ಸಿದ್ಧಾಪುರ, ಗಿರಿಯಪ್ಪ ಸಪೂರ, ಕಲಘಟಗಿ, ಮಡಿವಾಳಪ್ಪ ಇಸರನ್ನವರ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
ಕಮಲಾಪುರ ಕೋಟಿ ಓಣಿಯ ಭಾಗದ ಉಮೇಶ್ ಹೆಬ್ಬಳ್ಳಿ ಸೇರಿದಂತೆ ಹಲವರು ಸಹ ಭಾಗವಹಿಸಿದರು.
Kshetra Samachara
26/04/2026 03:03 pm
LOADING...