ಶಿವಮೊಗ್ಗ : ವೃದ್ಧಾಪ್ಯ ವೇತನ ನೀಡದ ಅಧಿಕಾರಿಗಳ ವಿರುದ್ಧ ಸಚಿವ ಮಧುಬಂಗಾರಪ್ಪ ತರಾಟೆ ತೆಗೆದುಕೊಂಡಿದ್ದಾರೆ. ಭದ್ರಾವತಿ ತಾಲೂಕಿನ ಅರಹತೊಳಲು ವಡ್ಡರಹಟ್ಟಿ ಗ್ರಾಮದ ವೃದ್ಧರೊಬ್ಬರು ನನಗೆ ವೃದ್ಧಾಪ್ಯ ವೇತನ ಬರುತ್ತಿಲ್ಲ, ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ದರು ಬಂದಿಲ್ಲ, ನನಗೆ ಮಕ್ಕಳಿಲ್ಲ, ಜೀವನ ಮಾಡೋದು ಕಷ್ಟವಾಗಿದೆ ಎಂದು ಸಚಿವರ ಬಳಿ ಆಳಲು ತೋಡಿಕೊಂಡರು.
ಈ ವೇಳೆ ಅಲ್ಲೇ ಗ್ರಾಮ ಲೆಕ್ಕಾಧಿಕಾರಿಗೆ ಸಚಿವರು ತರಾಟೆ ತೆಗೆದುಕೊಂಡರು. ಸರ್ಕಾರದ ಸೌಲಭ್ಯ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು, ಅದು ಸರಿಯಾಗಿ ನಿರ್ವಹಣೆ ಮಾಡದಿದ್ರೆ ಹೇಗೆ, ಕೂಡಲೇ ಇವತ್ತು ಸಂಜೆಯೊಳಗೆ ಅವರಿಗೆ ವೃದ್ಧಾಪ್ಯ ವೇತನ ಬರುವಾಗೇ ಮಾಡಬೇಕು, ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದರು.
PublicNext
28/04/2026 07:43 pm
LOADING...