ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಕುವೆಂಪು ವಿವಿಯಲ್ಲಿ ಹಿಂಸಾತ್ಮಕ ಪ್ರತಿಭಟನೆ - 'ಇವರು ವಿದ್ಯಾರ್ಥಿಗಳಲ್ಲ, ಕಿಡಿಗೇಡಿಗಳು' - ಕುಲಪತಿ ಆಕ್ರೋಶ

ಶಿವಮೊಗ್ಗ : ಎನ್‌ಎಸ್‌ಯುಐ ನೇತೃತ್ವದಲ್ಲಿ ಕುವೆಂಪು ವಿವಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪೀಠೋಪಕರಣ ಧ್ವಂಸಗೊಳಿಸಿರುವುದು ಕಿಡಿಗೇಡಿಗಳ ಕೃತ್ಯ. ಇವರು ಯಾರು ವಿದ್ಯಾರ್ಥಿಗಳಲ್ಲ, ಅಂತಹವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.

ಪ್ರತಿಭಟನೆ ವೇಳೆ ನಡೆದ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎಂಬಿಎ ವಿಭಾಗದ ಮಾರಾಟ ಮಳಿಗೆ ಪ್ರಾರಂಭ ಮಾಡಿದ್ದೇವು. ಈ ಸಮಯದಲ್ಲಿ ಕಚೇರಿಯಿಂದ ಕಾಲ್ ಬಂತು. ಯಾರೋ ಕಿಡಿಗೇಡಿಗಳು ನುಗ್ಗಿ ಪಾಟ್ ಒಡೆದಿದ್ದಾರೆ ಎಂದು ಹೇಳಿದರು.

ನಾನು ಬಂದಾಗ ಘೇರಾವ್ ಹಾಕಿದರು. ತಳ್ಳಾಡಲು ಪ್ರಯತ್ನಿಸಿದರು. ನಂತರ ಪ್ರತಿಭಟನಾನಿರತರು ನನ್ನನ್ನು ಒಳಗೆ ಬಿಟ್ಟರು. ಅವರು ಯಾವ ಪಕ್ಷದವರು ನನಗೆ ಗೊತ್ತಿಲ್ಲ. ಸಮಸ್ಯೆಯನ್ನು ಹೇಳುತ್ತಿಲ್ಲ. ಕುವೆಂಪು ಅವರಿಗೆ ಅವಮಾನ ಆಗುವ ರೀತಿ ಕಿಡಿಗೇಡಿಗಳು ನಡೆದುಕೊಂಡಿದ್ದಾರೆ ಎಂದರು.

ನಾಲ್ಕು ದಿನದ ಹಿಂದೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿ, ಬಗೆಹರಿಸುವ ಕೆಲಸ ಆಗುತ್ತಿತ್ತು. ವಿವಿಯ ಆವರಣದಲ್ಲಿನ ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡಿದ್ದಾರೆ. ಇದರ ಬಗ್ಗೆ ಕಠಿಣ ಕ್ರಮ ಆಗುತ್ತದೆ. ವಿವಿಯಲ್ಲಿ ನೋವುಂಟು ಮಾಡುವ ಘಟನೆ ಆಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತದೆ ಎಂದರು.

ಈ ಘಟನೆಯ ಹಿಂದೆ ಯಾರೋ ಇದ್ದಾರೆ. ಅವರ ವಿರುದ್ಧ ತನಿಖೆ ಆಗುತ್ತದೆ. ವಿವಿಯಿಂದ ಹಿಂದೆ ಹೊರಹೋದ ಅಧಿಕಾರಿಗಳೇ ಕೃತ್ಯದ ಹಿಂದಿದ್ದಾರೆ.

ಕುವೆಂಪು ವಿವಿಯ ವಿರುದ್ಧ ಸುಳ್ಳು ಆಪಾದನೆ ಮಾಡುವ ಕೆಲಸ ಆಗಿದೆ. ಘಟನೆಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದರು.

Edited By :
PublicNext

PublicNext

30/04/2026 07:43 am

Cinque Terre

8.21 K

Cinque Terre

0

ಸಂಬಂಧಿತ ಸುದ್ದಿ