ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮೀನು ಸಾಗಾಟದ ಲಾರಿ ಪಲ್ಟಿ - ಇಬ್ಬರು ಪವಾಡ ಸದೃಶ ಪಾರು

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ಮೀನು ಸಾಗಾಟದ ಲಾರಿ ಪಲ್ಟಿಯಾಗಿ , ವಾಹನದಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರೊಬ್ಬರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ.

ಗಾಯಗೊಂಡವರನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಿವಾಸಿ ಮಹೇಶ್ (28) ಮತ್ತು ಬೈಂದೂರು ತಾಲೂಕಿನ ನಾವುಂದ ನಿವಾಸಿ ಝಾಹಿದ್ (30) ಎಂದು ಗುರುತಿಸಲಾಗಿದೆ.

ರತ್ನಗಿರಿಯಿಂದ ಕೇರಳಕ್ಕೆ ಮೀನು ಸಾಗಾಟ ಮಾಡುತ್ತಿದ್ದ ಮೀನಿನ ಲಾರಿ ಸೋಮವಾರ ಬೆಳಿಗ್ಗೆ ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ತಲುಪುತ್ತಿದ್ದಂತೆ ಬೆಳಗಿನ ಜಾವ 4 ಗಂಟೆಗೆ ಸುರಿದ ಭಾರೀ ಮಳೆಗೆ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಸೀದಾ ಎಡಬದಿಗೆ ಚಲಿಸಿ ಹೆದ್ದಾರಿ ಬದಿಯ ಕಬ್ಬಿಣದ ತಡೆಬೇಲಿಗೆ ದಿಕ್ಕಿ ಹೊಡೆದು ಸುಮಾರು 10 ಅಡಿ ಆಳದ ಹೊಂಡಕ್ಕೆ ಬಿದ್ದಿದೆ.

ಅಪಘಾತದಿಂದ ಲಾರಿ ಚಾಲಕ ಮಹೇಶ್ ಕಾಲಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಅಪಘಾತದಿಂದ ಮೀನಿನ ಲಾರಿ ಸಂಪೂರ್ಣ ಜಖಂಗೊಂಡಿದ್ದು, ಹೆದ್ದಾರಿ ಕಬ್ಬಿಣದ ತಡೆಬೇಲಿಗೆ ಹಾನಿಯಾಗಿದೆ

ಅಪಘಾತ ನಡೆದ ಕೂಡಲೇ ಹೆದ್ದಾರಿ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರು ದಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ ಅಪಘಾತಗೊಂಡ ಲಾರಿಯನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು.

ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Edited By :
PublicNext

PublicNext

28/04/2026 08:29 pm

Cinque Terre

41.36 K

Cinque Terre

0

ಸಂಬಂಧಿತ ಸುದ್ದಿ