ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡ್ ಬಳಿ ಭೀಕರ ಅಪಘಾತ : ನಜ್ಜುಗುಜ್ಜಾದ ಕಾರು, ಚಾಲಕ ಪವಾಡಸದೃಶ ಪಾರು!

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡ್ ಬೈಪಾಸ್ ಜಂಕ್ಷನ್ ಬಳಿ ಕಾರೊಂದು ಹೆದ್ದಾರಿಯ ಕಬ್ಬಿಣದ ತಡೆಬೇಲಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು , ಚಾಲಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾನೆ.

ಗಾಯಾಳು ಚಾಲಕನನ್ನು ಮಂಗಳೂರಿನ ಬೋಂದೆಲ್ ನಿವಾಸಿ ಸುನಿಲ್ ಕುಮಾರ್(42) ಎಂದು ಗುರುತಿಸಲಾಗಿದೆ. ಸುನಿಲ್ ಕುಮಾರ್ ಮಂಗಳೂರಿನಿಂದ ಕಾರ್ಕಳ ಕಡೆಗೆ ಪ್ರಾಜೆಕ್ಟ್ ವರ್ಕ್ ಗೆ ಕಾರಿನಲ್ಲಿ ತೆರಳುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಸಮೀಪದ ಕಾರ್ನಾಡ್ ಬೈಪಾಸ್ ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ವಾಹನದ ಜೊತೆ ಅಪಘಾತ ತಪ್ಪಿಸಲು ಯತ್ನಿಸಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ನಡುವಿನ ಕಬ್ಬಿಣದ ತಡೆಬೇಲಿ ಹಾಗೂ ಅಪಘಾತ ನಿಯಂತ್ರಣದ ಬ್ಲಿಂಕಿಂಗ್ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಈ ಸಂದರ್ಭ ಕಾರು ಚಾಲಕ ಸುನಿಲ್ ಕುಮಾರ್ ಕಾರಿನ ಒಳಗಡೆ ಸಿಲುಕಿಕೊಂಡಿದ್ದು ಸ್ಥಳೀಯರು ಪ್ರಯಾಸದಿಂದ ಹೊರ ತೆಗೆದಿದ್ದಾರೆ.ಅಪಘಾತದ ರಭಸಕ್ಕೆ ಕಾರಿಗೆ ಸಂಪೂರ್ಣ ಹಾನಿಯಾಗಿದ್ದು, ಹೆದ್ದಾರಿ ಕಬ್ಬಿಣದ ತಡೆಬೇಲಿ ಹಾಗೂ ಬ್ಲಿಂಕಿಂಗ್ ಲೈಟ್ ನ ಕಂಬ ಜಖಂ ಗೊಂಡಿದೆ.ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಉಂಟಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Edited By : Shivu K
PublicNext

PublicNext

28/04/2026 10:30 pm

Cinque Terre

23.32 K

Cinque Terre

0

ಸಂಬಂಧಿತ ಸುದ್ದಿ