ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅವಧಿಗೂ ಮುನ್ನವೇ ವರುಣನ ಆಗಮನ - ಸಿಲಿಕಾನ್ ಸಿಟಿಯಲ್ಲಿ ಸಂಜೆ 5ಕ್ಕೇ ಕತ್ತಲು!

ಬೆಂಗಳೂರು: ಹವಾಮಾನ ಮುನ್ಸೂಚನೆಯಂತೆ ಇಂದು ಅವಧಿಗೂ ಮುನ್ನವೇ ಬೆಂಗಳೂರಿನಲ್ಲಿ ವರುಣನ ಆಗಮನವಾಗಿದೆ! ವಿಪರೀತ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆಗೆ ವಾಹನ ಸವಾರರು ಬೆಚ್ಚಿ ಬೀಳುವಂತೆ ಮಾಡಿತು. ಹಠಾತ್ತನೇ ಶುರುವಾದ ಮಳೆ-ಗಾಳಿಯ ಪರಿಣಾಮ ಸಂಜೆ ಐದರ ಸುಮಾರಿಗೆ ಎಲ್ಲೆಡೆ ಕತ್ತಲೆ ಆವರಿಸಿದಂತಾಯಿತು. ಮಳೆಯ ಹೊಡೆತಕ್ಕೆ ಅಲ್ಲಲ್ಲಿ ಮರಗಳ ರೆಂಬೆ-ಕೊಂಬೆಗಳು ಮುರಿದು ಬಿದ್ದಿರೋದು ಕಂಡು ಬಂತು.

ಮತ್ತೆ ಕೆಲವೆಡೆ ಮರಗಳೇ ಧರಾಶಾಹಿಯಾದ ಬಗ್ಗೆಯೂ ವರದಿಯಾಗಿದೆ. ಒಟ್ಟಿನಲ್ಲಿ ಬಿರು ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರಿನ ಜನತೆಗೆ ಇಂದು ಸುರಿದ ಮಾಘ ಮಳೆ ತಂಪೆರೆದಂತಾಗಿದೆ. ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ವೈಯಾಲಿಕಾವಲ್, ಇಂದಿರಾನಗರ, ಆರ್.ಟಿ.ನಗರ, ಹೆಬ್ಬಾಳ ಸೇರಿದಂತೆ ಮತ್ತಿತರೆಡೆ ಮಳೆ ಜೋರಾಗಿತ್ತು.

Edited By :
PublicNext

PublicNext

29/04/2026 08:01 pm

Cinque Terre

12.36 K

Cinque Terre

0

ಸಂಬಂಧಿತ ಸುದ್ದಿ