ಕೂಡ್ಲಿಗಿ : ಅಪಘಾತ ಪ್ರಕರಣವೊಂದರಲ್ಲಿ ಸಾರಿಗೆ ಇಲಾಖೆ ಪರಿಹಾರ ನೀಡದ್ದಕ್ಕೆ ಸಾರಿಗೆ ಇಲಾಖೆಯ ಎರಡು ಬಸ್ ಜಪ್ತಿಗೆ ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶ ನೀಡಿದೆ.
2019ರಲ್ಲಿ ಕೊಪ್ಪಳ ಡಿಪೋಗೆ ಸೇರಿದ ಬಸ್ ಹಾಗೂ ಆಟೋ ನಡುವೆ ಅಪಘಾತವಾಗಿತ್ತು. ಆಟೋದಲ್ಲಿ ಪ್ರಯಾಣಿಸುತ್ತಿದ್ದ ನಾಗಪ್ಪ (50) ನಾಗಮ್ಮ (24) ಮೃತಪಟ್ಟಿದ್ದರು. ಮೃತರ ಕುಟುಂಬಸ್ಥರು ಪರಿಹಾರಕ್ಕಾಗಿ ಕೂಡ್ಲಿಗಿ ತಾಲೂಕು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ವಾದ ಆಲಿಸಿದ ನ್ಯಾಯಾಧೀಶರು ಮೃತಕುಟುಂಬಸ್ಥರಿಗೆ ತಲಾ 12 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದರು. ಕೊಪ್ಪಳ ಸಾರಿಗೆ ಇಲಾಖೆಗೆ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಆದೇಶ ನೀಡಲಾಗಿತ್ತು. ಪರಿಹಾರ ನೀಡಲು ವಿಳಂಬ ಮಾಡಿದ್ದ ಕೊಪ್ಪಳ ಸಾರಿಗೆ ಇಲಾಖೆಗೆ ಸೇರಿದ ಬಸ್‌ಗಳನ್ನು ಕೂಡ್ಲಿಗಿ ಹಿರಿಯ ಶ್ರೇಣಿಯ ನ್ಯಾಯಾಧೀಶರ ಆದೇಶದಂತೆ ಕೋರ್ಟ್ ಸಿಬ್ಬಂದಿ ಬಸ್ ಜಪ್ತಿ ಮಾಡಿದ್ದಾರೆ.
PublicNext
30/04/2026 09:29 am
LOADING...