ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಮಾದಕ ವಸ್ತುಗಳ ಚಟದಿಂದ ದೂರವಿರಿ : ಎನ್.ಹೇಮಂತ್‌ ಕುಮಾರ್

ಶಿವಮೊಗ್ಗ : ಮಾದಕ ವಸ್ತುಗಳ ಚಟದಿಂದ ದೂರವಿರಿ ಎಂದು ಜಿ.ಪಂ. ಸಿಇಓ ಎನ್.ಹೇಮಂತ್‌ಕುಮಾರ್ ಹೇಳಿದರು. ಸಹ್ಯಾದ್ರಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ಜನಾಂಗ ಬಹುಬೇಗ ಮಾದಕ ವಸ್ತುಗಳಿಗೆ ದಾಸರಾಗಿಬಿಡುತ್ತಾರೆ. ಮಾದಕ ವಸ್ತು ಸೇವನೆ ತುಂಬಾ ಅಪಾಯಕಾರಿಯಾಗಿದೆ. ಕೇವಲ ಗಾಂಜಾ ಮಾತ್ರವಲ್ಲದೆ, ಸಿಗರೇಟು, ಮದ್ಯ ಇತರೆ ಮಾದಕ ವಸ್ತುಗಳು ಕೂಡ ಇದಕ್ಕೆ ಸೇರ್ಪಡೆಯಾಗುತ್ತವೆ. ಇದಕ್ಕೆ ದಾಸರಾದವರು ಮೆದುಳಿನ ಜೀವಕೋಶಗಳನ್ನೇ ಕಳೆದುಕೊಳ್ಳುತ್ತಾರೆ. ಜ್ಞಾಪಕಶಕ್ತಿ ಕಡಿಮೆಯಾಗುತ್ತದೆ. ಅಂಗಾಂಗಗಳ ಚಲನೆ ಸರಿಯಾಗಿರುವುದಿಲ್ಲ. ಖಿನ್ನತೆಗೆ ಒಳಗಾಗಿ ಓದುವ ಉತ್ಸಾಹವನ್ನೇ ಮರೆಯುತ್ತಾರೆ. ಅಷ್ಟೇ ಅಲ್ಲ, ಊಟ ಕೂಡ ಸೇರದೆ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಂಡು ಜೀವನೋತ್ಸವವನ್ನೇ ಕಳೆದುಕೊಳ್ಳುತ್ತಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು ಇದನ್ನು ತಡೆಗಟ್ಟಲು ಸಾಮೂಹಿಕ ಪ್ರಯತ್ನ ಅಗತ್ಯ ಎಂದರು.

Edited By : PublicNext Desk
Kshetra Samachara

Kshetra Samachara

30/04/2026 10:55 am

Cinque Terre

240

Cinque Terre

0

ಸಂಬಂಧಿತ ಸುದ್ದಿ