ನಲ್ಲಿಯಲ್ಲಿ ಚರಂಡಿ ಮಿಶ್ರಿತ ನೀರು : ಜನರಿಗೆ ಗಂಡಾಂತರ
ಬೆಳಗಾವಿ: ಚರಂಡಿಯ ಕೊಳಚೆ ನೀರು, ನೀರಿನ ವಾಲ್ ಒಳಗೆಡೆ ಸೇರಿಕೊಳ್ಳುತ್ತಿರುವುದರಿಂದ ಚರಂಡಿ ಮಿಶ್ರಿತ ನೀರು ಹೇಗೆ ಬಳಕೆ ಮಾಡಬೇಕು ಎಂದು ಜನ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ಮೂರು ವರ್ಷಗಳಿಂದ ಬೆಳಗಾವಿಯ ಶಿವಾಜಿ ನಗರದಲ್ಲಿ ಚರಂಡಿ ಬ್ಲಾಕ್ ಆಗಿ ಚರಂಡಿ ನೀರು ರಸ್ತೆ ಮೇಲೆ ಬಂದು ನೀರು ಬಿಡುವ ವಾಲ್ ನಲ್ಲಿ ಸೇರಿಕೊಳ್ಳುತ್ತಿದೆ. ನಾಲ್ಕೈದು ದಿನಕ್ಕೊಮ್ಮೆ ನೀರು ಬಿಡುವುದರಿಂದ ರಸ್ತೆ ಮೇಲಿನ ಚರಂಡಿ ನೀರು ವಾಲ್ ನಲ್ಲಿ ಸೇರಿಕೊಳ್ಳುತ್ತಿದೆ. ಇದೇ ಕೊಳಚೆ ನೀರು ಬೇರೆ ದಾರಿ ಇಲ್ಲದೆ ಸ್ಥಳೀಯರು ಬಳಸಬೇಕಾಗಿದೆ.
ಕಳೆದ ಮೂರು ವರ್ಷಗಳಿಂದ ಈ ಪ್ರದೇಶದಲ್ಲಿ ಮನೆಯೊಂದು ನಿರ್ಮಾಣ ಆಗುತ್ತಿದೆ. ಈ ಮನೆಯವರು ಚರಂಡಿ ಮೇಲೆಯೇ ಮಣ್ಣು ಹಾಕಿ ಮುಚ್ಚಿದ್ದಾರೆ. ಇದರಿಂದ ಚರಂಡಿ ಬ್ಲಾಕ್ ಆಗಿ ನೀರೆಲ್ಲ ರಸ್ತೆ ಮೇಲೆ ಬಂದು ಅವಾಂತರ ಸೃಷ್ಟಿಯಾಗುತ್ತಿದೆ. ಚರಂಡಿ ಮಿಶ್ರಿತ ನೀರು ಬಳಸಿ ಜನರಲ್ಲಿ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಚರಂಡಿ ಬ್ಲಾಕ್ ಮಾಡಿರುವ ಮನೆ ಮಾಲೀಕರಿಗೆ ಸಾಕಷ್ಟು ಸಲ ಸಮಸ್ಯೆ ಸರಿಪಡಿಸುವಂತೆ ಹೇಳಿದರು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಸಣ್ಣದೊಂದು ಸಮಸ್ಯೆ ಖಾಸಗಿ ವ್ಯಕ್ತಿಗಳ ಲಾಭಕ್ಕೆ ಕಳೆದ ಮೂರು ವರ್ಷದಿಂದ ಸಮಸ್ಯೆಯಾಗಿಯೇ ಉಳಿದಿದ್ದು, ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿಲ್ಲ. ಈಗಲಾದರೂ ಸಮಸ್ಯೆಗೆ ಸರಿಯಾಗುತ್ತಾ ಎಂದು ಕಾದು ನೋಡಬೇಕು.
ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ
PublicNext
30/04/2026 12:49 pm
LOADING...