ಹುಬ್ಬಳ್ಳಿ: ಸುಮಾರು ವರ್ಷಗಳಿಂದ ಹುಬ್ಬಳ್ಳಿ - ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಬೇಕೆಂದು ಒತ್ತಾಯ ಮಾಡ್ತಾನೇ ಬಂದಿದ್ದಾರೆ. ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಹುಬ್ಬಳ್ಳಿ ಧಾರವಾಡ ಪಾಲಿಕೆ ವಿಭಜನೆ ವಿಚಾರ ಗದ್ದಲಕ್ಕೆ ಕಾರಣವಾಗಿದೆ. ಸಾಮಾನ್ಯ ಸಭೆಯನ್ನು ಅರ್ಧಕ್ಕೆ ಮೊಟುಕುಗೊಳಿಸಿ ಮೇಯರ್ ಹೋಗಿದ್ದಕ್ಕೆ ಪಾಲಿಕೆ ಸದಸ್ಯರು ಪೇಪರ್ ಹರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಪ್ರತ್ಯೇಕ ಪಾಲಿಕೆ ರದ್ದು ಮಾಡಿ ಬೃಹತ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಂತ ಘೋಷಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಸಭೆಯಲ್ಲಿ ಠರಾವು ಮಾಡಿದರು. ಆದರೆ ಯಾವ ಸದಸ್ಯರಿಗೂ ಚರ್ಚೆ ಮಾಡದೆ ಠರಾವು ಪಾಸು ಮಾಡಿದ್ದಕ್ಕೆ ಪಾಲಿಕೆಯ ಕೈ ಸದಸ್ಯರು ಪೇಪರ್ ಹರಿದು ಹಾಕಿ, ಮೇಯರ್ ಪೀಠದ ಮುಂದೆ ಹೋಗಿ ಪ್ರತಿಭಟನೆ ಮಾಡಿದರು. ಮೇಯರ್ ಮತ್ತು ಬಿಜೆಪಿ ಸದಸ್ಯರ ವಿರುದ್ಧ ಕೈ ಸದಸ್ಯರಿಂದ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಧಾರವಾಡ ಪ್ರತ್ಯೇಕ ಪಾಲಿಕೆ ಮಾಡುವುದನ್ನು ತಪ್ಪಿಸಲು ಹುನ್ನಾರ ಅಂತ ಕೈ ಸದಸ್ಯರು ಆರೋಪ ಮಾಡುತ್ತ ಹೋರಾಟ ಮಾಡುತ್ತಿದ್ದರೆ, ಇತ್ತ ಕ್ಯಾರೆ ಎಂಬಂತೆ ಮೇಯರ್ ಮತ್ತು ಬಿಜೆಪಿ ಸದಸ್ಯರು ಎದ್ದು ಹೋದರು. ಪ್ರತ್ಯೇಕ ಮಹಾನಗರ ಪಾಲಿಕೆ ವಿಚಾರ ಯಾವಾಗ ಅಂತ್ಯ ಆಗುತ್ತದೆಂದು ಕಾಯ್ದು ನೋಡಬೇಕಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2026 04:59 pm
LOADING...