ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈದ್ಯರು ಚೀಟಿ ಬರೆಯದ ಔಷಧಿಗಳಿಗೆ ಮಾತ್ರೆ ನೀಡಿದರೆ ಕಠಿಣ ಕ್ರಮ, ದಾಳಿ ವೇಳೆ ಡಿಸಿ, ಎಸ್.ಪಿ ಖಡಕ್ ವಾರ್ನ್

ಹೊಸಪೇಟೆ : ಮೆಡಿಕಲ್ ಶಾಪ್ ಗಳಲ್ಲಿ ಮಾದಕ ವ್ಯಸನಿ ವಸ್ತುಗಳು, ಡ್ರಗ್ ಅಡಿಕ್ಟ್ ಔಷಧಿಗಳ ಬಳಕೆ ಆಗುತ್ತಿದೆ ಅನ್ನೋ ಆರೋಪದ ಮೇರೆಗೆ ಔಷಧಿಗಳ ಅಂಗಡಿಗಳಿಗೆ ವಿಜಯನಗರ ಡಿಸಿ, ಎಸ್ಪಿ ದಿಢೀರ್ ಭೇಟಿ, ನೀಡಿ ಪರಿಶೀಲನೆ ನಡೆಸಿದರು.

ವಿಜಯನಗರ ಡಿಸಿ ಕವಿತಾ ಮನ್ನಿಕೇರಿ, ಎಸ್ಪಿ ಜಾಹ್ನವಿ, ಡ್ರಗ್ ಕಂಟ್ರೋಲ್ ಆಫೀಸರ್ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ವೈದ್ಯರ ಬರೆದಿರುವ ಔಷಧಿಗಳಿಗೆ ರಸೀದಿ ಇಲ್ಲದೇ ಮಾತ್ರೆ, ಔಷಧಿಗಳನ್ನು ನೀಡದಂತೆ ಔಷಧಿ ಅಂಗಡಿಗಳ ಮಾಲೀಕರಿಗೆ ಡಿಸಿ, ಎಸ್ಪಿ, ಖಡಕ್ ಎಚ್ಚರಿಕೆ ನೀಡಿದರು. ನಗರದ ಹೊಸಪೇಟೆ ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಶಾಪ್ ಗಳಿಗೆ ವಿಸಿಟ್ ಮಾಡಿ ಮಾಲೀಕರಿಗೆ ವಾರ್ನ್ ನೀಡಿದರು.

ಔಷಧಿ ಅಂಗಡಿಗಳ ಮುಂದೆ ಕಡ್ಡಾಯವಾಗಿ ಇಲಾಖೆ ನೀಡಿರುವ ಸೂಚನಾ ಫಲಕ ಅಳವಡಿಸಬೇಕು. ಔಷಧಿಗಳ ವಹಿವಾಟನ್ನು ಕಂಪ್ಯೂಟರ್ ಹಾಗೂ ರಿಜಿಸ್ಟರ್ ಬುಕ್ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ವೈದ್ಯರ ರಸೀದಿಯಿಲ್ಲದೇ ಮಾತ್ರೆ, ಔಷಧಿಗಳನ್ನು ನೀಡುವಂತಿಲ್ಲ.

ಒಂದು ವೇಳೆ ವೈದ್ಯರ ರಸೀದಿ ಇಲ್ಲದೇ ಮಾತ್ರೆಗಳನ್ನು ನೀಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಅಂತ ದಾಳಿ ವೇಳೆ ಮೆಡಿಕಲ್ ಶಾಪ್ ಓನರ್ ಗಳಿಗೆ ವಿಜಯನಗರ ಡಿಸಿ ಕವಿತಾ ಮನ್ನಿಕೇರಿ, ಎಸ್ಪಿ ಎಸ್ ಜಾಹ್ನವಿ ವಾರ್ನ್ ಮಾಡಿದರು.

Edited By : Vinayak Patil
Kshetra Samachara

Kshetra Samachara

30/04/2026 05:49 pm

Cinque Terre

1.98 K

Cinque Terre

0

ಸಂಬಂಧಿತ ಸುದ್ದಿ