ಕೂಡ್ಲಿಗಿ : ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಎರಡೂ ತಾಲೂಕುಗಳಿಗೆ ಗಡಿ ಗ್ರಾಮ ಆಗಿರೋ ಸುಂಕದಕಲ್ಲು ಗ್ರಾಮ 20ಕ್ಕೂ ಅಧಿಕ ವರ್ಷಗಳಿಂದ ಅಧಿಕಾರಿಗಳು, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕಾಣದೇ ಜಾಗೆಯೇ ಉಳಿದಿದೆ.
ಕಳೆದ 25 ವರ್ಷಗಳಿಂದ ಸುಂಕದಕಲ್ಲು ಗ್ರಾಮದಲ್ಲಿ ವಾಸವಿದ್ದೇವೆ. ಆದ್ರೆ ಇಲ್ಲೀವರೆಗೂ ಹಕ್ಕು ಪತ್ರ ನೀಡಿಲ್ಲ ಅಂತ ಶಾಸಕ ಶ್ರೀನಿವಾಸ್ ಬಳಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಗಡಿ ಗ್ರಾಮ ಆಗಿದ್ರಿಂದ ಮೂಲ ಭೂತ ಸೌಕರ್ಯಗಳು ಕುಸುಮವಾಗಿದ್ದು, ಅಭಿವೃದ್ಧಿ ಮಾಡಿಕೊಡಿ ಅಂತ ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಕೂಡಲೇ ಸ್ಪಂದಿಸಿದ ಶಾಸಕರು ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶೀಘ್ರವೇ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಗೆ ಅಗತ್ಯ ಕ್ರಮಕ್ಕೆ ಸೂಚಿಸಿದರು.
ಗ್ರಾಮಸ್ಥರಿಗೆ ಸ್ಪಂದಿಸದ ಪಿಡಿಓ ಅಮಾನತುಗೊಳಿಸಿ
ಸುಂಕದಕಲ್ಲು ಗ್ರಾಮ ಅಭಿವೃದ್ಧಿಯಿಂದ ಹಿಂದೆ ಉಳಿದಿದೆ. ಶಾಸಕ ಡಾ ಎನ್ ಟಿ ಶ್ರೀನಿವಾಸ್ ಗ್ರಾಮಕ್ಕೆ ಭೇಟಿ ಕೊಟ್ಟಾಗ ಗ್ರಾಮಸ್ಥರು ಸಮಸ್ಯೆ ಅಂತ ಪಿಡಿಓ ಬಳಿ ಹೋದ್ರೆ ಒಂದೇ ಒಂದು ಸಣ್ಣ ಕೆಲಸ ಮಾಡಿಕೊಡಲ್ಲ.
ಹೀಗಾಗಿ ಇಂತಹ ಪಿಡಿಓ ನಮಗೆ ಬೇಡ ಅಂತ ಆಕ್ರೋಶ ಹೊರಹಾಕಿದ್ರು. ಗ್ರಾಮಸ್ಥರ ಆಕ್ರೋಶದ ಬಳಿಕ ಕೂಡ್ಲಿಗಿ ಶಾಸಕ ಶ್ರೀನಿವಾಸ್ ಕೂಡಲೇ ಸಿಇಓ, ಸೇರಿ ಮೇಲಾಧಿಕಾರಿಗಳಿಗೆ ಫೋನ್ ಕರೆ ಮಾಡೋ ಮೂಲಕ ಸುಂಕದಕಲ್ಲು ಗ್ರಾಮದಲ್ಲಿ ಪಿಡಿಓ ವಿರುದ್ಧ ಇಡೀ ಗ್ರಾಮಸ್ಥರಿಂದ ಗಂಭೀರ ಆರೋಪಗಳು ಕೇಳಿಬಂದಿವೆ.
ಇದ್ರಿಂದ ಕೂಡಲೇ ಪಿಡಿಓರನ್ನ ಕೂಡಲೇ ಅಮಾನತುಗೊಳಿಸಿ ಆದೇಶಿಸುವಂತೆ ಸೂಚನೆ ನೀಡಿದ್ರು.
Kshetra Samachara
01/05/2026 04:10 pm
LOADING...