ಉತ್ತರ ಪ್ರದೇಶದ ಮೀರತ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ಸಿಬಿಐ (CBI) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ (CGHS) ಅಡಿಷನಲ್ ಡೈರೆಕ್ಟರ್ ಡಾ. ನತಾಶಾ ವರ್ಮಾ ಅವರನ್ನು ಲಂಚ ಪಡೆಯುತ್ತಿದ್ದ ವೇಳೆ ಬಂಧಿಸಲಾಗಿದೆ.
ಡಾ. ನತಾಶಾ ವರ್ಮಾ ಅವರು ತಮ್ಮದೇ ಕಚೇರಿಯ ಸಿಬ್ಬಂದಿಯೊಬ್ಬರಿಂದ ಮತ್ತು ಖಾಸಗಿ ಆಸ್ಪತ್ರೆಗಳಿಂದ ದೊಡ್ಡ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ತನ್ನ ಕಚೇರಿಯ ಸಿಬ್ಬಂದಿ ತರುಣ್ ಎಂಬುವವರ ವರ್ಗಾವಣೆಗಾಗಿ ಡಾ. ನತಾಶಾ 50 ಸಾವಿರ ರೂಪಾಯಿ ಲಂಚ ಕೇಳಿದ್ದರು ಎನ್ನಲಾಗಿದೆ. CGHS ಪ್ಯಾನಲ್‌ನಲ್ಲಿ ಖಾಸಗಿ ಆಸ್ಪತ್ರೆಗಳ ನವೀಕರಣಕ್ಕಾಗಿ ತಲಾ 20 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದರು.
ಮೀರತ್‌ನ ಸುಮಾರು 16 ಖಾಸಗಿ ಆಸ್ಪತ್ರೆಗಳ ನವೀಕರಣಕ್ಕೆ ಸಂಬಂಧಿಸಿದಂತೆ ಇವರು ಕೋಟ್ಯಂತರ ರೂಪಾಯಿಗಳ ಡೀಲ್ ನಡೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಬಿಐ ತಂಡವು, ಸಾಕ್ಷ್ಯಧಾರಗಳೊಂದಿಗೆ ಡಾ. ನತಾಶಾ ಅವರನ್ನು ಬಂಧಿಸಿದೆ. ಪ್ರಸ್ತುತ ಈ ಜಾಲದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ.
PublicNext
02/05/2026 02:56 pm
LOADING...