ಕುಂದಗೋಳ : ಸರ್ಕಾರಿ ಶಾಲೆಯಲ್ಲಿ ನಿಯಮಾವಳಿ ಮೀರಿ ನಡೆದ ಘಟನೆಗಳು ಇದೀಗ ಜಿಲ್ಲಾ ಮಟ್ಟದಲ್ಲಿ ಸದ್ದು ಮಾಡುತ್ತಲಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹ ಮಾಡಿದೆ.
ಎಸ್..! ವೀಕ್ಷಕರೇ ಕುಂದಗೋಳ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ವ್ಯಾಪ್ತಿಯ ಹಿರೆಹರಕುಣಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಗೆ 12 ಜನ ಹೆಣ್ಣು ಮಕ್ಕಳ ದಾಖಲಾತಿ, ಎಸ್ಡಿಎಂಸಿ ರಚನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ದೂರು ಕೇಳಿ ಬಂದಿದ್ದವು.
ಈ ವಿಷಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಕೊನೆಗೆ ಶಿಕ್ಷಣ ಇಲಾಖೆ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರನ್ನೂ ತಲುಪಿದರು ಯಾವುದೇ ಕ್ರಮ ಕೇಳಿ ಬಂದಿಲ್ಲ.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿದೆ.
ಒಟ್ಟಾರೆ ಮಕ್ಕಳ ಭವಿಷ್ಯ ಕಟ್ಟಬೇಕಾದ ಶಾಲಾ ಶಿಕ್ಷಣ ಶಿಕ್ಷಕರು ಯಾವ ತಪ್ಪು ಮಾಡಿದ್ದಾರೆ ? ಶಿಕ್ಷಕರ ವಿರುದ್ಧ ಕೇಳಿ ಬಂದಿರೋ ಆರೋಪಗಳು ನಿಜವೇ ! ಸುಳ್ಳೋ ? ಈ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸುತ್ತಾ ಕಾದು ನೋಡಬೇಕಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
02/05/2026 03:05 pm
LOADING...