ಜೋರಾದ ಮಳೆಯ ಹೊಡೆತಕ್ಕೆ ಬೆಂಗಳೂರಿನ ಹಲವೆಡೆ ಮರಗಳು ಮತ್ತು ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದು ಮೂರು ದಿನಗಳೇ ಕಳೆದರೂ ಇನ್ನೂ ಎಲ್ಲೆಂದರಲ್ಲಿ ಮರಗಳ ರೆಂಬೆ-ಕೊಂಬೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿಲ್ಲ. ಇದರಿಂದಾಗಿ ನಿತ್ಯ ಓಡಾಡುವ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಮಳೆ ಬಂದು ಅವಾಂತರ ಸೃಷ್ಟಿಸಿದ ಪರಿಣಾಮ ಅಲ್ಲಲ್ಲಿ ಉರುಳಿ ಬಿದ್ದ ಮರಗಳ ಕಾಂಡವನ್ನು ಕತ್ತರಿಸಿ ತುಂಡುಗಳನ್ನಾಗಿ ಮಾಡಿ ತೆರವುಗೊಳಿಸಿದ ನಗರ ಪಾಲಿಕೆಯವರು ರಸ್ತೆ, ಫುಟ್ ಪಾತ್ ಗಳಲ್ಲಿ ಬಿದ್ದಿರೋ ಮರಗಳ ಅವಶೇಷಗಳನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ. ದೂರವಾಣಿ ಕರೆ ಮಾಡಿ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ ಅಂತಾ ನಾಗರಿಕರು ದೂರುತ್ತಾರೆ.
PublicNext
02/05/2026 04:44 pm
LOADING...