ಸ್ಮೋಕಿಂಗ್ ಝೋನ್ ಆಗಿ ದೇವನಹಳ್ಳಿ ತಾಲ್ಲೂಕು ಕಚೇರಿ ಆವರಣ ಮಾರ್ಪಟ್ಟಿದೆ.ಕಚೇರಿ ಆವರಣದಲ್ಲಿ ಸೇದಿ ಬಿಸಾಡಿರುವ ಸಿಗರೇಟ್ ತುಂಡುಗಳ ರಾಶಿ ಬಿದ್ದಿದೆ.ನಿರ್ಮಾಣ ಸ್ಥಗಿತವಾಗಿರುವ ಶೌಚಾಲಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ.ಅಕ್ರಮ ಚಟುವಟಿಕೆಗಳನ್ನು ನೋಡಿದರೂ ತಹಶೀಲ್ದಾರ್ ಜಾಣ ಮೌನವಹಿಸಿದ್ದಾರೆ.ಮತ್ತೊಂದೆಡೆ ಮೂಲಭೂತ ಸೌಕರ್ಯಗಳಿಲ್ಲದೆ ತಹಶೀಲ್ದಾರ್ ಕಚೇರಿ ಸೊರಗುತ್ತಿದೆ.ನೀರು, ಶೌಚಾಲಯದ, ಲಿಫ್ಟ್ ಇಲ್ಲದೆ ವಯಸ್ಸಾದ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಇನ್ನು ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.ಕುರಿಗಳ ಸಂತೆಯಂತೆ ತಾಲ್ಲೂಕು ಆಫೀಸ್ ಕಾಣುತ್ತೆ, ಅವ್ಯವಸ್ಥೆಗಳನ್ನ ನಿಮ್ಮ ಕೈಯಲ್ಲಿ ಸರಿಪಡಿಸಲು ಆಗದಿದ್ದರೆ ನಾವೇ ಭಿಕ್ಷೆ ಬೇಡಿ ಸರಿಪಡಿಸುತ್ತೇವೆ,ಭೂಗಳ್ಳರಿಗೇ ಸೇವೆ ಕೊಡ್ತಿದ್ದಾರೆ, ಸಾರ್ವಜನಿಕರಿಗೆ ಸೇವೆ ಕೊಡೋದು ಯಾವಾಗ..?ಕೂಡಲೇ ಅವ್ಯವಸ್ಥೆ ಸರಿಪಡಿಸಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
PublicNext
02/05/2026 03:20 pm
LOADING...