ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 30 ವರ್ಷ ನಂತರ ದ್ಯಾಮವ್ವ ತಾಯಿ, ದುರ್ಗಮ್ಮ ತಾಯಿ ಜಾತ್ರೆಗೆ ಅದ್ಧೂರಿ ಚಾಲನೆ

ಧಾರವಾಡ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಧಾರವಾಡ ಹಾವೇರಿ ಪೇಟೆಯ ದ್ಯಾಮವ್ವ ತಾಯಿ ಹಾಗೂ ದುರ್ಗಮ್ಮ ತಾಯಿ ಜಾತ್ರಾ ಮಹೋತ್ಸವಕ್ಕೆ 30 ವರ್ಷಗಳ ನಂತರ ಚಾಲನೆ ದೊರೆಯಿತು.

ಹೌದು... ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿಯವರು ದೇವಿಯರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಿದರು. ಹೆಬ್ಬಳ್ಳಿ ಗ್ರಾಮದ ಚೈತನ್ಯ ಆಶ್ರಮದ ದತ್ತಾವದೂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಐದು ದಿನಗಳ ಕಾಲ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಂಪ್ರದಾಯಿಕ ಪೂಜೆಗಳು, ರಥೋತ್ಸವ, ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ಗ್ರಾಮದೇವಿ ಜಾತ್ರೆ ಎಂದರೆ ಕೇವಲ ಮನರಂಜನೆಯಲ್ಲ, ಅವು ನಮ್ಮ ಸಂಸ್ಕೃತಿ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ಅಲ್ಲದೇ ಹಳ್ಳಿ ಸೊಗಡಿನ ಹೆಮ್ಮೆಯ ಪ್ರತಿಬಿಂಬ. 30 ವರ್ಷಗಳ ನಂತರ ಧಾರವಾಡ ಹಾವೇರಿ ಪೇಟೆಯಲ್ಲಿ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಬೀದಿ ಬದಿಯಲ್ಲಿ ದೀಪಾಲಂಕಾರ ಹಾಗೂ ದೇವಿಯರ ಮೂರ್ತಿ ಅಲಂಕಾರ ಪೂಜೆ ಎಲ್ಲ ಭಕ್ತರ ಗಮನ ಸೆಳೆಯಿತು.

Edited By :
Kshetra Samachara

Kshetra Samachara

02/05/2026 10:42 pm

Cinque Terre

9.12 K

Cinque Terre

0

ಸಂಬಂಧಿತ ಸುದ್ದಿ