ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೋರ್ಟ್‌ನಲ್ಲಿ ಛೀಮಾರಿ ಹಾಕಿದ್ರು ಇವರಿಗೆ ನಾಚಿಕೆ ಇಲ್ಲ..!

ಬೆಂಗಳೂರು: ರಾಜಧಾನಿಯ ಅತ್ಯಂತ ಪ್ರತಿಷ್ಠಿತ ಹಾಗೂ ಹಳೆಯ ಪ್ರದೇಶಗಳಲ್ಲಿ ಒಂದಾದ ಮಲ್ಲೇಶ್ವರಂ… ಆದರೆ ಇಂದಿನ ವಾಸ್ತವ ಸ್ಥಿತಿ ಹೇಗಿದೆ? ಇಲ್ಲಿನ ಜನರು ನಿಜವಾಗಿಯೂ ನೆಮ್ಮದಿಯಿಂದ ಇದ್ದಾರಾ?

ಈ ಪ್ರಶ್ನೆಗೆ ಉತ್ತರ ಹುಡುಕಲು ಪಬ್ಲಿಕ್ ನೆಕ್ಸ್ಟ್ ತಂಡ ಮಲ್ಲೇಶ್ವರಂನಲ್ಲಿ ನೇರ ಸಮೀಕ್ಷೆ ನಡೆಸಿತು. ಗಲ್ಲಿಗಲ್ಲಿಗಳಲ್ಲಿ ಸಂಚರಿಸಿ, ಸ್ಥಳೀಯ ನಿವಾಸಿಗಳ ಜೊತೆ ಮಾತನಾಡಿ, ಅವರ ದಿನನಿತ್ಯದ ಸಮಸ್ಯೆಗಳನ್ನು ಆಲಿಸಲಾಯಿತು. ಇದರ ಜೊತೆಗೆ, ಬಿಬಿಎಂಪಿ ಕಸದ ವಾಹನಗಳು ನಿಗದಿತ ಸಮಯಕ್ಕೆ ಬರುವುದಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ. ಹಲವೆಡೆ ರಸ್ತೆ ಬದಿಯೇ ಕಸದ ರಾಶಿ ಕಾಣಿಸಿಕೊಂಡಿದೆ. “ಭಾಗ್ಯ ಕೊಡ್ಲಿಕ್ಕೆ ಹಣ ಇದೆ… ಆದರೆ ಚುನಾವಣೆ ಮಾಡೋಕೆ ಹಣ ಇಲ್ವಾ? ಕೋರ್ಟ್‌ನಲ್ಲಿ ಛೀಮಾರಿ ಹಾಕಿದ್ರೂ ಇವರಿಗೆ ನಾಚಿಕೆ ಇಲ್ಲ…” ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

05/05/2026 07:17 pm

Cinque Terre

9.91 K

Cinque Terre

0

ಸಂಬಂಧಿತ ಸುದ್ದಿ