ಬೆಂಗಳೂರು: ಕೊಟ್ಟವನು ಕೋಡಂಗಿ ಈಸ್ಕೊಂಡೋನು ಈರಭದ್ರ ಅನ್ನೋ ಹಾಗೆ ಆಗಿದೆ. ಇವರ ಸ್ಥಿತಿ. ಇವರೆಲ್ಲ ಮೋಸ ಹೋದವರೇ. ಬಡ್ಡಿ ಆಸೆಗಾಗಿ ತಮ್ಮ ಬಳಿ ಇದ್ದ ಹಣವನ್ನು ವಂಚಕ ಕಂಪನಿಯೊಂದಕ್ಕೆ ಕೊಟ್ಟು ಕೈ ಸುಟ್ಟುಕೊಂಡವರೇ..
ನಿಮ್ಮ ಹಣವನ್ನು ಡಬಲ್ ಮಾಡಿಕೊಡಲಾಗುತ್ತೆ ಅಂತಾ ನಂಬಿಸಿ ಮೋಸ ಮಾಡಿ ಕೈ ಎತ್ತಿದ ಕಂಪನಿಯ ಹೆಸರು ಗ್ರೀನ್ ಬರ್ಡ್ಸ್ ಆಗ್ರೋ ಫಾರ್ಮ್ ಲಿಮಿಟೆಡ್. 2013 ರಲ್ಲಿ ಈ ವಂಚಕ ಕಂಪನಿಗೆ ಸುಮಾರು ಎರಡು ಲಕ್ಷ ಮಂದಿ ಹಣ ಹೂಡಿದ್ದಾರೆ! ಹೀಗೆ ಬಡ್ಡಿಯ ಆಸೆ ತೋರಿಸಿ ಗ್ರೀನ್ ಬರ್ಡ್ ಕಂಪನಿ ಮುಂಡೈಸಿದ ಹಣ ಎಷ್ಟು ಗೊತ್ತೆ? ನೂರ ಐವತ್ತಕ್ಕೂ ಅಧಿಕ ಕೋಟಿ! ಕಂಪನಿ ಮಾಡಿದ ಮೋಸಕ್ಕೆ ಬೇಸತ್ತು ಈಗಾಗಲೇ 24 ಮಂದಿ ಠೇವಣಿದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೋರಾಟಗಾರ ಕುರುಬೂರು ಶಾಂತಕುಮಾರ್ ಅವರು ಹೇಳುತ್ತಾರೆ ಕೇಳಿ.
PublicNext
05/05/2026 08:18 pm
LOADING...