ಶಿವಮೊಗ್ಗ: ಬೆಂಗಳೂರಿನ ಕಾಲೇಜೊಂದರ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಯೊಬ್ಬ ಧರಿಸಿದ್ದ ಜನಿವಾರವನ್ನು ಅಲ್ಲಿನ ಸಿಬ್ಬಂದಿ ತೆಗೆಸಿದ್ದಾರೆ. ಇದನ್ನು ಖಂಡಿಸಿ ಅಖಿಲ ಕರ್ನಾಟಕ ಸ್ಮಾರ್ಥ ಬ್ರಾಹ್ಮಣ ಸಂಘದ ಹೆಚ್.ಎಸ್. ಗಣೇಶ್ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಧರಣಿಗು ಮುನ್ನ ಜಿಲ್ಲಾಧಿಕಾರಿ ಭೇಟಿಯಾಗಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ನಡೆದ ಈ ಘಟನೆ ಒಂದು ಸಮುದಾಯದ ಧಾರ್ಮಿಕ ಆಚರಣೆಗೆ ಮಾಡಿದ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಹೆಚ್.ಎಸ್.ಗಣೇಶ್, ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿರುವುದು ನಮ್ಮ ಸಮುದಾಯಕ್ಕೆ ಮತ್ತು ಧರ್ಮಕ್ಕೆ ಮಾಡಿದ ಅವಮಾನ. ಈ ಘಟನೆ ಖಂಡಿಸಿ ಅಹೋರಾತ್ರಿ ಶಾಂತಿಯುತ ಧರಣಿ ನಡೆಸುತ್ತಿದ್ದೇನೆ. ಬ್ರಾಹ್ಮಣ ಸಮುದಾಯದ ವಿವಿಧ ಸಂಘಟನೆಗಳ ಒಬ್ಬೊಬ್ಬ ಪ್ರಮುಖರು ಇಡೀ ರಾತ್ರಿ ತಮ್ಮೊಂದಿಗೆ ಕೆಲ ಹೊತ್ತು ಇದ್ದು ಧರಣಿಗೆ ಬೆಂಬಲ ನೀಡಲಿದ್ದಾರೆ ಎಂದರು.
Kshetra Samachara
06/05/2026 08:22 am
LOADING...