ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೇಳೈರು: ಕಲುಷಿತಗೊಂಡ ನಂದಿನಿ ನದಿ- ಹೋರಾಟ ಸಮಿತಿ, ಸಾರ್ವಜನಿಕರಿಂದ ಹಠಾತ್ ಪ್ರತಿಭಟನೆ

ಸುರತ್ಕಲ್: ಇತಿಹಾಸ ಪ್ರಸಿದ್ಧ ಚೇಳೈರು ಖಂಡಿಗೆ ನಂದಿನಿ ನದಿಗೆ ಮುಂಚೂರು ವೆಟ್ ವೆಲ್ ನ ಹತ್ತಿರದ ಒಳಚರಂಡಿಯ ಕೊಳಚೆ ನೀರು ಕೊಡಿಪಾಡಿಯಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ಸಂಸ್ಕರಣಾ ಘಟಕದ ನೀರು, ಚೊಕ್ಕಬೆಟ್ಟು ಪರಿಸರದ ಮನೆಯ ತ್ಯಾಜ್ಯ ನೀರು, ಮುಕ್ಕದ ಖಾಸಗಿ ಆಸ್ಪತ್ರೆ, ಕಾಲೇಜು, ವಸತಿ ಗೃಹ ಮತ್ತು ಹೋಟೆಲ್ ಗಳ ತ್ಯಾಜ್ಯ ನೀರುಗಳನ್ನು ನಂದಿನಿ ನದಿಗೆ ಬೀಡುವುದರಿಂದ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿದೆ.

ಇದರಿಂದಾಗಿ ಚೇಳೈರು ಖಂಡಿಗೆ ಭಾಗದ ಅನೇಕ ಕೃಷಿಯನ್ನೆ ಅವಲಂಬಿತ ಕುಟುಂಬಗಳು ಕೃಷಿ ಮಾಡದ ಪರಿಸ್ಥಿತಿ ಎದುರಾಗಿದ್ದು , ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದು ಬಾವಿಗಳು ಮಲೀನಗೊಂಡಿದೆ ಮಾತ್ರವಲ್ಲದೆ ಇತಿಹಾಸ ಪ್ರಸಿದ್ಧ ಖಂಡಿಗೆ ದೈವಸ್ಥಾನದ ಮೀನು ಹಿಡಿಯುವ ಜಾತ್ರೆ ನಿಲ್ಲುವಂತಾಗಿದೆ, ಶುಕ್ರವಾರ ಖಂಡಿಗೆ ಜಾತ್ರೆಯ ಪ್ರಯುಕ್ತ ಮೀನು ಹಿಡಿಯಲು ಜನವೇ ಇಲ್ಲದಿರುವುದನ್ನು ಕಂಡು ನಂದಿನಿ ನದಿ ಹೋರಾಟ ಸಮಿತಿ ಮತ್ತು ಸಾರ್ವಜನಿಕರಿಂದ ಹಠಾತ್ ಪ್ರತಿಭಟನೆ ನಡೆಯಿತು ಪ್ರತಿಭಟನಾಕಾರರು ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಧಿಕ್ಕಾರ ಕೂಗಿ, ಮುಂಬರುವ ದಿನಗಳಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದರುಹೋರಾಟ ಸಮಿತಿಯ ಪ್ರಮುಖರಾದ ಸುಕೇಶ್ ಶೆಟ್ಟಿ ಚೇಳೈರು ಗ್ರಾಮ ಮಾಜಿ ಪಂಚಾಯತ್ ಅಧ್ಯಕ್ಷ ಜಯಾನಂದ ಮಾತನಾಡಿ ಪ್ರಮುಖರಾದ ದಿವಾಕರ ಸಾಮಾನಿ , ಧಾರ್ಮಿಕ ಮುಖಂಡ ಕಿರಣ್ ಶೆಟ್ಟಿ ಕೆರೆಮನೆ ,ನಂದಿನಿ ನದಿ ಹೋರಾಟ ಸಮಿತಿಯ ನಿತಿನ್ ಶೆಟ್ಟಿ ಖಂಡಿಗೆ ಚೇಳೈರು ಗ್ರಾ ಪಂ ,ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ,ಮಾಜಿ ಸದಸ್ಯ ವಿನಯಕುಮಾರ್ ಶೆಟ್ಟಿ, ಗಂಗಾಧರ ಪೂಜಾರಿ ಚೇಳೈರು ಕಾಲನಿ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/05/2026 03:37 pm

Cinque Terre

796

Cinque Terre

0

ಸಂಬಂಧಿತ ಸುದ್ದಿ