ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ವ್ಯರ್ಥವಾಗಿ ಹರಿದು ಚರಂಡಿ ಸೇರುತ್ತಿದೆ ಕುಡಿಯುವ ನೀರು

ಚಳ್ಳಕೆರೆ: ಕುಡಿಯುವ ನೀರು ವ್ಯರ್ಥವಾಗುತ್ತಿರುವ ವಿಷಯವು ಅತ್ಯಂತ ಗಂಭೀರವಾದುದು. ನೀರು ಅಮೂಲ್ಯ ಸಂಪನ್ಮೂಲವಾಗಿದ್ದು, ಅದನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಕುಡಿಯುವ ನೀರಿನ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸುವ ಪೈಪ್ ಹೊಡೆದು ಹೋಗಿ ಅಮೂಲ್ಯವಾದ ನೀರು ಚರಂಡಿ ಸೇರುತ್ತಿದ್ದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ ತಾಲ್ಲೂಕಿನ ಯಲಗಟ್ಟ ಗೊಲ್ಲರಹಟ್ಟಿಯ ಹಳೆ ಹಟ್ಟಿಯಲ್ಲಿ. ಬೋರ್ ವೆಲ್ ನಿಂದ ನೀರಿನ ಟ್ಯಾಂಕ್ ಗೆ ಸಂಪರ್ಕ ಕಲ್ಪಿಸುವ ಪೈಪ್ ಹೊಡೆದು ಹೋಗಿದ್ದು ಇದರಿಂದ ನೀರು ವ್ಯರ್ಥವಾಗಿ ಹರಿದು ಚರಂಡಿ ಸೇರುತ್ತದೆ.

ಬೇಸಿಗೆಯ ಬಿಸಿಲು ನೀರಿನ ಅಭಾವ ಇಂಥ ಸಂದರ್ಭದಲ್ಲಿ ಅಮೂಲ್ಯವಾದ ನೀರು ವ್ಯರ್ಥವಾಗುತ್ತಿರುವುದನ್ನು ಕಂಡು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಉಪಯೋಗವಾಗಿಲ್ಲ ವ್ಯರ್ಥವಾಗಿ ನೀರು ಹರಿಯುತ್ತಿರುವುದನ್ನು ತಡೆಯುತ್ತಿಲ್ಲ ಎಂದು ಗೊಲ್ಲರಹಟ್ಟಿ ಗ್ರಾಮಸ್ಥರಾದ ಮಂಜುನಾಥ, ಉಮೇಶ, ರಮೇಶ, ಕುಮಾರ್ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Edited By :
PublicNext

PublicNext

15/05/2026 06:14 pm

Cinque Terre

12.1 K

Cinque Terre

0

ಸಂಬಂಧಿತ ಸುದ್ದಿ