ಫಾಸ್ಟ್ ಫುಡ್ ಪ್ರಿಯರೇ ಒಮ್ಮೆ ಇತ್ತ ಗಮನ ಹರಿಸಿ. ನೀವು ಹೋಟೆಲ್‌ಗಳಲ್ಲಿ, ಚಾಟ್ಸ್ ಸೆಂಟರ್‌ಗಳಲ್ಲಿ ನಾಲಿಗೆ ಚಪ್ಪರಿಸುತ್ತಾ ತಿನ್ನುವ ಟೊಮೆಟೊ ಹಾಗೂ ಚಿಲ್ಲಿ ಸಾಸ್‌ಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಉತ್ತರ ಪ್ರದೇಶದ ಹಾಪುರ್‌ನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.
ಇಲ್ಲಿನ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FSDA) ಅಧಿಕಾರಿಗಳು ಭೀಕರ ಕಲಬೆರಕೆ ಸಾಸ್ ತಯಾರಿಸುತ್ತಿದ್ದ ಗೋದಾಮಿನ ಮೇಲೆ ದಾಳಿ ನಡೆಸಿ, ದೊಡ್ಡ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಮೇ 18ರಂದು ಹಾಪುರ್ ಜಿಲ್ಲೆಯ ಗೋದಾಮೊಂದರ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಕಸದ ತೊಟ್ಟಿಯಂತಹ, ಕೊಳಕು ವಾತಾವರಣದಲ್ಲಿ ಯಾವುದೇ ಪರವಾನಗಿ ಇಲ್ಲದೆ ನಕಲಿ ಮತ್ತು ವಿಷಪೂರಿತ ರಾಸಾಯನಿಕಗಳನ್ನು ಬಳಸಿ ಸಾಸ್‌ಗಳನ್ನು ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ.
ಕೊಳೆತ ವಸ್ತುಗಳು, ನಿಷೇಧಿತ ಬಣ್ಣಗಳು ಹಾಗೂ ಕೆಮಿಕಲ್‌ಗಳನ್ನು ಬಳಸಿ ಇಲ್ಲಿ ಟೊಮೆಟೊ ಮತ್ತು ಸೋಯಾ ಸಾಸ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಸಪ್ಲೈ ಮಾಡಲಾಗುತ್ತಿತ್ತು. ಸದ್ಯ ಅಧಿಕಾರಿಗಳು ಸಾಸ್‌ನ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಗೋದಾಮನ್ನು ಸಂಪೂರ್ಣವಾಗಿ ಸೀಜ್ ಮಾಡಿದ್ದಾರೆ. ಅಲ್ಲದೆ ಗ್ರಾಹಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.
PublicNext
20/05/2026 05:22 pm
LOADING...