ಚಂಡೀಗಢ: ನಗರದ ಐಷಾರಾಮಿ ಏರಿಯಾದ ರಸ್ತೆಯೊಂದರಲ್ಲಿ ಮಗುವನ್ನು ಚೇರ್‌ನಲ್ಲಿ ಕೂರಿಸಿ ಸಾಗುತ್ತಿದ್ದ ಮಹಿಳೆಯೊಬ್ಬರನ್ನು ಕೆಳಗೆ ತಳ್ಳಿ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಲೂಟಿಕೋರರು ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಚಂಡೀಗಢದ ಪ್ರತಿಷ್ಠಿತ ಬಡಾವಣೆಯೊಂದರ ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರು ಸಣ್ಣ ಮಗುವನ್ನು ಚೇರ್‌ನಲ್ಲಿ ಕೂರಿಸಿಕೊಂಡು ದೂಡಿಕೊಂಡು ಹೋಗುತ್ತಿದ್ದರು. ರಸ್ತೆ ನಿರ್ಜನವಾಗಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡ ಇಬ್ಬರು ಕಳ್ಳರು ಬೈಕ್‌ನಲ್ಲಿ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.
ಬೈಕ್, ಮಹಿಳೆಯ ಸಮೀಪ ಬರುತ್ತಿದ್ದಂತೆಯೇ ಹಿಂಬದಿಯಲ್ಲಿ ಕುಳಿತಿದ್ದ ಲೂಟಿಕೋರ ತಕ್ಷಣ ಕೆಳಗಿಳಿದು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದ್ದಾನೆ. ಈ ಹಠಾತ್ ಎಳೆತದ ರಭಸಕ್ಕೆ ಮಹಿಳೆ ಕೆಳಗೆ ಬಿದ್ದಿದ್ದಾರೆ. ತಾನು ಕೆಳಗೆ ಬಿದ್ದರೂ ಧೈರ್ಯ ಗುಂದದ ಮಹಿಳೆ, ತನ್ನ ಚಿನ್ನದ ಸರವನ್ನು ಉಳಿಸಿಕೊಳ್ಳಲು ಆ ಕಳ್ಳನೊಂದಿಗೆ ಬಲವಾದ ಪ್ರತಿರೋಧ ತೋರಿದ್ದಾರೆ, ತೀವ್ರವಾಗಿ ಸೆಣಸಾಡಿದ್ದಾರೆ.
ಆದರೆ, ಮಹಿಳೆಯ ಹೋರಾಟದ ನಡುವೆಯೂ ಆ ಲೂಟಿಕೋರ ಸರವನ್ನು ಬಲವಂತವಾಗಿ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ತಕ್ಷಣವೇ ಮುಂದೆ ಬೈಕ್ ಚಾಲೂ ಮಾಡಿಕೊಂಡು ಕಾಯುತ್ತಿದ್ದ ತನ್ನ ಸಹಚರನೊಂದಿಗೆ ಕುಳಿತು ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ.
PublicNext
20/05/2026 06:05 pm
LOADING...