ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಯಂತ್ರಣ ತಪ್ಪಿದ ನುಗ್ಗಿದ ಎಲೆಕ್ಟ್ರಿಕ್ ಕಾರ್, ಹಲವು ವಾಹನಗಳಿಗೆ ಡಿಕ್ಕಿ, ಟಿಫಿನ್ ಸೆಂಟರ್‌ಗೆ ನುಗ್ಗಿದ ವಾಹನ!

ಹೈದರಾಬಾದ್: ಭಾಗ್ಯನಗರದ ಜನನಿಬಿಡ ಪ್ರದೇಶವಾದ ಕೂಕಟ್‌ಪಲ್ಲಿಯಲ್ಲಿ ಬುಧವಾರ (ಮೇ 20) ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವೇಗವಾಗಿ ಬಂದ ಎಲೆಕ್ಟ್ರಿಕ್ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಇತರ ವಾಹನಗಳಿಗೆ ಹಾಗೂ ಹೋಟೆಲ್‌ಗೆ ಡಿಕ್ಕಿ ಹೊಡೆದಿದೆ.

ಕೂಕಟ್‌ಪಲ್ಲಿಯ ವಿವೇಕಾನಂದ ನಗರ ಆರ್ಚ್‌ನಿಂದ ಆಲ್ವಿನ್ ಕಾಲೋನಿ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅತಿ ವೇಗವಾಗಿ ಬಂದ ಎಲೆಕ್ಟ್ರಿಕ್ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮತ್ತೊಂದು ಕಾರು ಹಾಗೂ ಕೆಲವು ದ್ವಿಚಕ್ರ ವಾಹನಗಳಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಅಷ್ಟಕ್ಕೇ ನಿಲ್ಲದ ಕಾರು, ನೇರವಾಗಿ ರಸ್ತೆ ಬದಿಯಲ್ಲಿದ್ದ ಟಿಫಿನ್ ಸೆಂಟರ್ ಒಂದಕ್ಕೆ ನುಗ್ಗಿ ನಿಂತಿದೆ. ಜನನಿಬಿಡ ರಸ್ತೆಯಾಗಿದ್ದರಿಂದ ಅಪಘಾತದ ವೇಳೆ ಸ್ಥಳೀಯರು ಹಾಗೂ ಗ್ರಾಹಕರು ದಿಕ್ಕಾಪಾಲಾಗಿ ಓಡಿದ್ದಾರೆ. ಇನ್ನು ಈ ಭೀಕರ ಅಪಘಾತದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Edited By :
PublicNext

PublicNext

21/05/2026 04:24 pm

Cinque Terre

14.64 K

Cinque Terre

0

ಸಂಬಂಧಿತ ಸುದ್ದಿ