ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆ ನೆಪದಲ್ಲಿ ಅಮಲು ಪದಾರ್ಥ ನೀಡಿ ಚಿನ್ನಾಭರಣ ದೋಚುತ್ತಿದ್ದ ‘ಕಿಲಾಡಿ ವಧು’ & ಗ್ಯಾಂಗ್ ಅರೆಸ್ಟ್

​ಲಲಿತ್‌ಪುರ (ಉತ್ತರ ಪ್ರದೇಶ): ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನ ಮನೆಯವರಿಗೆ ಅಮಲು ಪದಾರ್ಥ ನೀಡಿ, ಚಿನ್ನಾಭರಣ ಹಾಗೂ ನಗದಿನೊಂದಿಗೆ ಪರಾರಿಯಾಗುತ್ತಿದ್ದ 8 ಜನರ ಖತರ್ನಾಕ್ ಗ್ಯಾಂಗ್ ಒಂದನ್ನು ಉತ್ತರ ಪ್ರದೇಶದ ಲಲಿತ್‌ಪುರ ಪೊಲೀಸರು ಯಶಸ್ವಿಯಾಗಿ ಮಟ್ಟಹಾಕಿದ್ದಾರೆ. ಬಂಧಿತರಲ್ಲಿ ಐವರು ಮಹಿಳೆಯರೂ ಸೇರಿದ್ದಾರೆ.

​​ಈ ಗ್ಯಾಂಗ್ ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿತ್ತು. ಮೊದಲು ಯುವಕರಿಗೆ ಮದುವೆಯ ಆಮಿಷ ಒಡ್ಡಿ ಮದುವೆ ಮಾಡಿಸುತ್ತಿದ್ದರು. ವಿವಾಹವಾದ ಕೆಲವೇ ದಿನಗಳಲ್ಲಿ ಇಡೀ ಕುಟುಂಬಕ್ಕೆ ನಿದ್ದೆ ಮಾತ್ರೆ ಅಥವಾ ಅಮಲು ಪದಾರ್ಥವನ್ನು ಆಹಾರದಲ್ಲಿ ಬೆರೆಸಿ ನೀಡುತ್ತಿದ್ದರು. ಎಲ್ಲರೂ ಪ್ರಜ್ಞೆ ತಪ್ಪುತ್ತಿದ್ದಂತೆ ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ರಾತ್ರೋರಾತ್ರಿ ಪರಾರಿಯಾಗುತ್ತಿದ್ದರು.

​​ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮೊಹಮ್ಮದ್ ಮುಷ್ತಾಕ್ ಮಾಹಿತಿ ನೀಡಿ,

​"ಮದುವೆ ಮಾಡಿಸುವುದು, ನಂತರ ಅತ್ತೆ-ಮಾವನ ಮನೆಯವರಿಗೆ ಅಮಲು ಪದಾರ್ಥ ನೀಡಿ ಮನೆಯಲ್ಲಿದ್ದ ಒಡವೆ ಹಾಗೂ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುವುದನ್ನೇ ಈ ಗ್ಯಾಂಗ್ ಹವ್ಯಾಸ ಮಾಡಿಕೊಂಡಿತ್ತು. ಸದ್ಯ ಐವರು ಮಹಿಳೆಯರು ಹಾಗೂ ಮೂವರು ಪುರುಷರು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ" ಎಂದರು.

​ ಬಂಧಿತರಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಮತ್ತು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

Edited By :
PublicNext

PublicNext

20/05/2026 07:33 pm

Cinque Terre

28.03 K

Cinque Terre

0

ಸಂಬಂಧಿತ ಸುದ್ದಿ