ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಹೊಟ್ಟೆಪಾಡಿಗಾಗಿ ಜೀವವನ್ನೇ ಪಣಕ್ಕಿಡುವ ಸ್ಥಿತಿ - ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ ವಿಡಿಯೋ!

ದೇಶವು ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಎಷ್ಟೇ ಮುನ್ನಡೆಯುತ್ತಿದ್ದರೂ, ತಳಮಟ್ಟದಲ್ಲಿ ಇಂದಿಗೂ ಮನುಷ್ಯರೇ ಮ್ಯಾನ್‌ ಹೋಲ್ ಇಳಿದು ಸ್ವಚ್ಛತೆಗಾಗಿ ಜೀವ ಪಣಕ್ಕಿಡುವ ಕಟು ವಾಸ್ತವ ಬದಲಾಗಿಲ್ಲ ಎಂಬುದನ್ನು ಬಿಂಬಿಸುವ ವಿಡಿಯೋವೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮೊಹಮ್ಮದ್ ಫ್ಯೂಚರ್‌ ವಾಲಾ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಅತ್ಯಂತ ಬೇಸರ ಮತ್ತು ಭಾವುಕತೆಯಿಂದ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಯ ದೊಡ್ಡ ದೊಡ್ಡ ಅಂಕಿ-ಅಂಶಗಳ ನಡುವೆಯೂ, ಸಾಮಾನ್ಯ ಶ್ರಮಿಕ ವರ್ಗದ ಬದುಕಿನ ಹೋರಾಟ ಮತ್ತು ಅಮಾನವೀಯ ಸ್ಥಿತಿಯನ್ನು ಈ ವಿಡಿಯೋ ಸಾಕ್ಷೀಕರಿಸುತ್ತದೆ. ಇದು ಉತ್ತರ ಪ್ರದೇಶದ ಘಾಜಿಯಾಬಾದ್‌ ನಗರದಲ್ಲಿ ಕಂಡುಬಂದ ದೃಶ್ಯ.

ವಿಡಿಯೋದಲ್ಲಿ ಕಾರ್ಮಿಕನೊಬ್ಬ ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ನೇರವಾಗಿ ಮ್ಯಾನ್‌ ಹೋಲ್‌ ನೊಳಗೆ ಇಳಿದು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಇದಕ್ಕೆ ತೀವ್ರ ಮರುಕ ವ್ಯಕ್ತಪಡಿಸಿ ವಿಡಿಯೋ ಪೋಸ್ಟ್‌ ಮಾಡಿರುವ ಮೊಹಮ್ಮದ್ ಫ್ಯೂಚರ್‌ ವಾಲಾ ಎಂಬುವವರು, ನಾವು ಆರ್ಥಿಕತೆಯಲ್ಲಿ ಎಷ್ಟನೇ ಸ್ಥಾನದಲ್ಲಿದ್ದೇವೆ ಎಂಬುದು ನನಗೆ ಮುಖ್ಯವಲ್ಲ.

ಆದರೆ, ಭಾರತದಲ್ಲಿ ಬದುಕಿ ಉಳಿಯಲು ಒಬ್ಬ ಮನುಷ್ಯ ಈ ಮಟ್ಟದ ಕೆಲಸವನ್ನು ಮಾಡಬೇಕಾಗಿ ಬಂದಿದೆ ಎಂದರೆ, ನಿಜಕ್ಕೂ ನನ್ನನ್ನು ಕ್ಷಮಿಸಿ ಎಂದಿದ್ದಾರೆ.

ರೋಬೋಟ್‌ಗಳು ಮತ್ತು ಆಧುನಿಕ ಯಂತ್ರಗಳ ಜಗತ್ತಿನಲ್ಲಿ ಬಡ ಕಾರ್ಮಿಕರನ್ನು ಇಂತಹ ಅಪಾಯಕ್ಕೆ ತಳ್ಳುತ್ತಿರುವುದು ಸರಿಯಲ್ಲ. ಆರ್ಥಿಕ ಪ್ರಗತಿಯು ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗದೆ, ಸಮಾಜದ ಕಟ್ಟಕಡೆಯ ಶ್ರಮಿಕನಿಗೂ ಗೌರವಯುತ ಬದುಕು ಸಿಗಲೇಬೇಕು.

Edited By : Abhishek Kamoji
PublicNext

PublicNext

20/05/2026 10:39 pm

Cinque Terre

33.4 K

Cinque Terre

3

ಸಂಬಂಧಿತ ಸುದ್ದಿ