ಕುಂದಗೋಳ : ಸಂಶಿ ಗ್ರಾಮದ ಕೆಎಲ್'ಇ ಸಂಸ್ಥೆಯ ಕಾಲೇಜಿನಲ್ಲಿ ಕೆಎಲ್ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಹುಬ್ಬಳ್ಳಿ ಮತ್ತು ಕೆಎಲ್ಇ ಕಾಲೇಜು ಸಂಶಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಾಳೆ ಶನಿವಾರ ಮೇ.23 ರಂದು ಮುಂಜಾನೆ ಬೆಳಿಗ್ಗೆ 9 ಗಂಟೆಗೆ ಕೆಎಲ್ಇ ಕಾಲೇಜಿನಲ್ಲಿ ಜರುಗಲಿದೆ.
ಶಿಬಿರದ ಅಧ್ಯಕ್ಷತೆಯನ್ನು ಕೆಎಲ್ಇ ಸಂಸ್ಥೆ ಸ್ಥಾನಿಕ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ ಇವರು ವಹಿಸಲಿದ್ದು ಉದ್ಘಾಟಕರಾಗಿ ಶಾಸಕ ಎಂ.ಆರ್.ಪಾಟೀಲ, ಮುಖ್ಯ ಅತಿಥಿಗಳಾಗಿ ಮಂಜುನಾಥ ಎಸ್ ಮುನವಳ್ಳಿ, ನಿರ್ದೇಶಕರು ಕೆಎಲ್ಇ ಸಂಸ್ಥೆ ಬೆಳಗಾವಿ ಹಾಗೂ ಅತಿಥಿಗಳಾಗಿ ಡಾ.ಎಂ.ಜಿ ಹಿರೇಮಠ ನಿರ್ದೇಶಕರು ಜೆಜಿಎಂಎಂ ವೈದ್ಯಕೀಯ ಆಸ್ಪತ್ರೆ ಹುಬ್ಬಳ್ಳಿ , ಡಾ.ಶಾರದಾ ಮೆಟಗುಡ ಪ್ರಾಚಾರ್ಯರು ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹುಬ್ಬಳ್ಳಿ , ಡಾ ಅರುಣಕುಮಾರ.ಎಂ ಆಡಳಿತ ಅಧಿಕಾರಿಗಳು ಜೆಜಿಎಂಎಂ ವೈದ್ಯಕೀಯ ಆಸ್ಪತ್ರೆ ಹುಬ್ಬಳ್ಳಿ , ಡಾ ಸಮೀರ್ ದೇಸಾಯಿ ಮೆಡಿಕಲ್ ಸುಪರಿಂಟೆಂಡೆಂಟ್ ಜೆಜಿ ಎಂ.ಎಂ ವೈದ್ಯಕೀಯ ಆಸ್ಪತ್ರೆ ಹುಬ್ಬಳ್ಳಿ ಇವರು ನುರಿತ ತಜ್ಞ ವೈದ್ಯರು ಆರೋಗ್ಯ ಶಿಬಿರಕ್ಕೆ ಆಗಮಿಸಲಿದ್ದಾರೆ.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸುವವರಿಗೆ ಉಚಿತ ಚಿಕಿತ್ಸೆ ಮತ್ತು ಉಚಿತ ಔಷಧಿಯನ್ನು ಸಹ ವಿತರಿಸಲಾಗುವುದು ಸಂಶಿ ಗ್ರಾಮದ ಸುತ್ತ ಮುತ್ತಲಿನ ಗ್ರಾಮಗಳ ಜನರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಶಿ ಕೆಎಲ್ಇ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷರಾದ ಎ.ಬಿ.ಉಪ್ಪಿನ ಮೂಲಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
22/05/2026 05:44 pm
LOADING...