ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆ ಖಾಲಿ ಖಾಲಿ ! ರೋಗದ ಜಾಗೃತಿ ಯಾರ ಹೊಣೆ ?

ಹುಬ್ಬಳ್ಳಿ : 9 ಹಳ್ಳಿಗಳ‌ ಜನರ ಆರೋಗ್ಯ ಕಾಳಜಿ ಮತ್ತು ಸಾಂಕ್ರಾಮಿಕ ರೋಗಗಳ ಜಾಗೃತಿ ಮಾಡಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿನ ಆರೋಗ್ಯ ನಿರೀಕ್ಷಣಾಧಿಕಾರಿಗಳೇ ಹುದ್ದೆ ಖಾಲಿ ಖಾಲಿಯಾಗಿವೆ.

ಹುಬ್ಬಳ್ಳಿ ತಾಲುಕೂ ನೂಲ್ವಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ನೂಲ್ವಿ, ಶರೇವಾಡ, ಪಾಳೆ, ಬೆಳಗಲಿ, ರಾಯನಾಳ, ಗಂಗಿವಾಳ, ಪರಸಾಪೂರ, ದೇವರಗುಡಿಹಾಳ, ರೇವಡಿಹಾಳಲ್ಲಿ ಆರೋಗ್ಯ ಕಾಳಜಿ ಮೂಡಿಸಬೇಕಾದ ಕಿರಿಯ ಆರೋಗ್ಯ ನಿರೀಕ್ಷಕರ 4 ಹುದ್ದೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ 1 ಹುದ್ದೆ ಖಾಲಿ ಇವೆ.

ಒಟ್ಟು 6 ಬೆಡ್ ಆಸ್ಪತ್ರೆ ಹೊಂದಿರುವ ನೂಲ್ವಿ ಆರೋಗ್ಯ ಕೇಂದ್ರದಲ್ಲಿ ಗ್ರೂಪ್ ಡಿ 2 ಹುದ್ದೆಗಳಲ್ಲಿ 1 ಹುದ್ದೆ ಹೊರಗುತ್ತಿಗೆ ಮೇಲೆ ನಡೆದಿದ್ದು, ಸ್ಟಾಪ್ ನರ್ಸ್ 1 ಹುದ್ದೆ ಖಾಲಿ ಇದೆ. ಮುಖ್ಯವಾಗಿ ಆರೋಗ್ಯ ಕೇಂದ್ರದ ಶುದ್ಧ ನೀರಿನ ಘಟಕದ ಅವ್ಯವಸ್ಥೆ ಸುಧಾರಣೆ ಕಾಣಬೇಕಿದೆ.

ಒಟ್ಟಾರೆ ನೂಲ್ವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳಿಂದ ಸೂಕ್ತ ಚಿಕಿತ್ಸೆ ಲಭ್ಯವಿದ್ದರೂ, 9 ಹಳ್ಳಿಗಳಲ್ಲಿ ರೋಗಗಳ ಜಾಗೃತಿ ದೂರವಾಗಿ ಮಳೆಗಾಲದಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಮ್.ಹೋನಕೇರಿ ಕ್ರಮ ಕೈಗೊಳ್ಳುತ್ತಾರಾ ? ಕಾದು ನೋಡಬೇಕಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/05/2026 01:01 pm

Cinque Terre

90.93 K

Cinque Terre

0

ಸಂಬಂಧಿತ ಸುದ್ದಿ