ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಧಿಕಾ ಮರ್ಚೆಂಟ್ ಭರತನಾಟ್ಯಕ್ಕೆ ನೆಟ್ಟಿಗರು ಫಿದಾ, ಅನನ್ಯಾ ಪಾಂಡೆ ಇವರನ್ನು ನೋಡಿ ಕಲಿಯಬೇಕೆಂದು ಕಮೆಂಟ್‌!

ಮುಂಬೈ: ಅಂಬಾನಿ ಕುಟುಂಬದ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಸದಾ ತಮ್ಮ ಸರಳತೆ ಮತ್ತು ಪ್ರತಿಭೆಯಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ರಾಧಿಕಾ ಮರ್ಚೆಂಟ್ ಅವರು ಅತ್ಯಂತ ಶಾಸ್ತ್ರೀಯವಾಗಿ ಭರತನಾಟ್ಯ ಪ್ರದರ್ಶಿಸುತ್ತಿರುವ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದ್ದು, ನೆಟ್ಟಿಗರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

The Jaipur Dialogues ರಾಧಿಕಾ ಅವರ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರಿಗೆ ಟಾಂಗ್ ನೀಡಿದೆ. ರಾಧಿಕಾ ಮರ್ಚೆಂಟ್ ಅತ್ಯಂತ ಆಕರ್ಷಕವಾಗಿ ಭರತನಾಟ್ಯ ಪ್ರದರ್ಶಿಸುತ್ತಿದ್ದಾರೆ. ಇದನ್ನು ನೋಡಿಯಾದರೂ ಕಲಿ ಅನನ್ಯಾ ಪಾಂಡೆ!" ಎಂದು ಜೈಪುರ್ ಡೈಲಾಗ್ಸ್ ಶೀರ್ಷಿಕೆ ನೀಡಿದೆ.

ಸಾಮಾನ್ಯವಾಗಿ ಬಾಲಿವುಡ್‌ನ ಸ್ಟಾರ್ ಕಿಡ್ಸ್ (ನೆಪೋಟಿಸಂ ಸಿನಿಮಾ ತಾರೆಗಳು) ಭಾರತೀಯ ಸಂಸ್ಕೃತಿ, ನೃತ್ಯ ಮತ್ತು ನಟನೆಯಲ್ಲಿ ಹಿಂದುಳಿದಿದ್ದಾರೆ ಎಂಬ ಟೀಕೆ ಸದಾ ಕೇಳಿಬರುತ್ತಿರುತ್ತದೆ. ಇತ್ತೀಚೆಗೆ ಅನನ್ಯಾ ಪಾಂಡೆ ಅವರ ನೃತ್ಯ ಅಥವಾ ನಟನೆಯ ಶೈಲಿಯನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು. ಇದೇ ಹಿನ್ನೆಲೆಯಲ್ಲಿ, ಮುಖೇಶ್‌ ಅಂಬಾನಿ ಸೊಸೆ ಭಾರತೀಯ ಶಾಸ್ತ್ರೀಯ ನೃತ್ಯವನ್ನು ಇಷ್ಟೊಂದು ಶ್ರದ್ಧೆಯಿಂದ ಕಲಿತಿರುವುದನ್ನ ನೋಡಿ ಅನನ್ಯಾ ಪಾಂಡೆ ಕಲಿಯಬೇಕು ಎಂದು ಜೈಪುರ್ ಡೈಲಾಗ್ಸ್ ಪೋಸ್ಟ್ ಮಾಡಿದೆ.

ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ನೂರಾರು ನೆಟ್ಟಿಗರು ರಾಧಿಕಾ ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ. "ಶ್ರೀಮಂತಿಕೆ ಇದ್ದರೂ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು ಶ್ಲಾಘನೀಯ" ಎಂದು ಕೆಲವರು ಬರೆದರೆ, "ಬಾಲಿವುಡ್‌ನವರಿಗೆ ಕೇವಲ ಪಾಶ್ಚಾತ್ಯ ನೃತ್ಯ ಮಾತ್ರ ಗೊತ್ತು, ನಮ್ಮ ಕ್ಲಾಸಿಕಲ್ ಡ್ಯಾನ್ಸ್ ಕಲಿಯಲು ಶ್ರದ್ಧೆ ಬೇಕು" ಎಂದು ಬಾಲಿವುಡ್ ನಟಿಯರ ಕಾಲೆಳೆದಿದ್ದಾರೆ.

Edited By : Nirmala Aralikatti
PublicNext

PublicNext

26/05/2026 02:31 pm

Cinque Terre

16.46 K

Cinque Terre

2

ಸಂಬಂಧಿತ ಸುದ್ದಿ