ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲೆಯ ಕಾರ್ಯಕ್ರಮಕ್ಕೆ ಬರಲಾಗದ ತಂದೆ, ಅಪ್ಪನಿಗಾಗಿ ಕೆಲಸದ ಜಾಗಕ್ಕೇ ಬಂದು ಸರ್‌ಪ್ರೈಸ್‌ ಕೊಟ್ಟ ಮಗಳು!

ಮಕ್ಕಳ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಅದರಲ್ಲಿ ಹೆತ್ತವರು ಭಾಗವಹಿಸಬೇಕೆಂದು ಮಕ್ಕಳು ಬಯಸುವುದು ಸಹಜ. ಅದರಲ್ಲೂ ಹೆಣ್ಣುಮಕ್ಕಳಿಗೆ ತಮ್ಮ ತಂದೆ ಆ ಸಂಭ್ರಮವನ್ನು ನೋಡಬೇಕು ಎಂಬ ಹಂಬಲ ತುಸು ಹೆಚ್ಚೇ ಇರುತ್ತದೆ. ಆದರೆ, ಈ ಪುಟ್ಟ ಬಾಲಕಿಯ ತಂದೆಗೆ ತನ್ನ ಕೆಲಸದ ಒತ್ತಡದಿಂದಾಗಿ ಮಗಳ ಶಾಲೆಯ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.

ತಂದೆ ಬರಲು ಸಾಧ್ಯವಾಗದಿದ್ದರೇನಂತೆ, ಮಗಳು ಮಾಡಿದ ಕೆಲಸ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಶಾಲೆಯ ಕಾರ್ಯಕ್ರಮಕ್ಕಾಗಿ ಸುಂದರವಾದ ಉಡುಪು ಧರಿಸಿ ಸಿದ್ಧಳಾದ ಈ ಪುಟ್ಟ ಬಾಲಕಿ, ಶಾಲೆಗೆ ಹೋಗುವ ಮುನ್ನ ನೇರವಾಗಿ ತನ್ನ ತಂದೆ ಕೆಲಸ ಮಾಡುವ ಜಾಗಕ್ಕೆ ಬಂದಿದ್ದಾಳೆ.

ನನ್ನ ಶಾಲೆಯ ಕಾರ್ಯಕ್ರಮಕ್ಕೆ ಅಪ್ಪ ಬರಲು ಸಾಧ್ಯವಾಗಲಿಲ್ಲ. ಅದಕ್ಕೇನು, ನಾನು ಎಷ್ಟು ಸುಂದರವಾಗಿ ಕಾಣುತ್ತಿದ್ದೇನೆ ಎಂದು ಅಪ್ಪನಿಗೆ ತೋರಿಸಲು ನಾನೇ ಅವರ ಕೆಲಸದ ಜಾಗಕ್ಕೆ ಬಂದೆ ಎಂಬಂತೆ ಆ ಬಾಲಕಿ ಅಲ್ಲಿಗೆ ಭೇಟಿ ನೀಡಿದ್ದಾಳೆ. ಸುಂದರವಾದ ಗೌನ್ ಧರಿಸಿ, ಮುದ್ದಾಗಿ ನಗುತ್ತಾ ಅಪ್ಪನ ಮುಂದೆ ನಿಂತಾಗ ಆ ತಂದೆಯ ಮುಖದಲ್ಲಿದ್ದ ಖುಷಿ ಪದಗಳಿಗೆ ನಿಲುಕದ್ದು.

Edited By : Vijay Kumar
PublicNext

PublicNext

26/05/2026 06:59 pm

Cinque Terre

91.44 K

Cinque Terre

4

ಸಂಬಂಧಿತ ಸುದ್ದಿ